ಕುತೂಹಲ ಮೂಡಿಸಿದ್ದ ಧರ್ಮಸ್ಥಳದ ಅಸ್ತಿಪಂಜರ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ನಿನ್ನೆ ಸ್ಥಳ ಮಹಜರು ನಡೆಸಿ ಮಾರ್ಕ್ ಮಾಡಿದ್ದ ಸ್ಥಳವನ್ನು ಇಂದು ಉತ್ಖನನ ಮಾಡುವ ಸಾಧ್ಯತೆ ಇದೆ. ಈಗಾಗಲೆ ಸ್ಥಳಕ್ಕೆ ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಅವರು ಬರುವಂತೆ ಎಸ್ ಐ ಟಿ ಸೂಚಿಸಿದೆ ಎಂದು ತಿಳಿದು ಬಂದಿದೆ.

ಅಗೆಯಲು 12 ಜನರ ನಿಯೋಜನೆಗೆ ಗ್ರಾಮ ಪಂಚಾಯತ್ ಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಹೊರಬರುತ್ತಿದೆ. ಉತ್ಖನನ ಕಾರ್ಯಕ್ಕೆ ಮಳೆ ಅಡ್ಡಿ ಆಗುವ ಕಾರಣ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.