ಮಂಗಳೂರು ವಿದ್ಯಾರ್ಥಿನಿ ರೆಮೊನಾ ಎವೆಟ್ ಪೆರೇರಾ ಅವರ 170 ಗಂಟೆಗಳ ಭರತನಾಟ್ಯ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಲು ಸಜ್ಜು

ಮಂಗಳೂರು ವಿದ್ಯಾರ್ಥಿನಿ ರೆಮೊನಾ ಎವೆಟ್ ಪೆರೇರಾ ಅವರ 170 ಗಂಟೆಗಳ ಭರತನಾಟ್ಯ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಲು ಸಜ್ಜು

ಮಂಗಳೂರು: ಸೆಂಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ವಿದ್ಯಾರ್ಥಿನಿ ರೆಮೊನಾ ಎವೆಟ್ ಪೆರೇರಾ ಇವಳು ಐತಿಹಾಸಿಕ 170 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನಲ್ಲಿ ಭಾಗವಹಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಲು ಸಜ್ಜಾಗಿದ್ದಾರೆ. ಜುಲೈ 21 ರಂದು ಪ್ರಾರಂಭವಾದ ಈ ಮ್ಯಾರಥಾನ್ ಇಂದು, ಜುಲೈ 28ರಂದು ಮಧ್ಯಾಹ್ನ 1 ಗಂಟೆಗೆ ಸಂಪೂರ್ಣಗೊಳ್ಳಲಿದೆ.

ಪ್ರತಿಯೊಂದು ಮೂರು ಗಂಟೆಗಳ ನಂತರ 15 ನಿಮಿಷ ವಿಶ್ರಾಂತಿ ಮಾತ್ರ ಪಡೆಯುವ ರೆಮೊನಾ ಈಗಾಗಲೇ 125ಕ್ಕೂ ಹೆಚ್ಚು ಗಂಟೆಗಳ ನಿರಂತರ ನೃತ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ನೃತ್ಯಯಾತ್ರೆ ಕೇವಲ ಶಾರೀರಿಕ ಶಕ್ತಿಯ ಪರೀಕ್ಷೆಯಲ್ಲ, ಇದು ಭಾರತೀಯ ಸಂಸ್ಕೃತಿಯ ಶಾಶ್ವತತೆಯ ಪ್ರತಿಬಿಂಬವೂ ಹೌದು.

ಪರಂಪರೆಯ ಶ್ರೇಷ್ಟತೆ, ಶ್ರದ್ಧೆ ಮತ್ತು ನೃತ್ಯದ ಆಸಕ್ತಿಯಿಂದ ತುಂಬಿದ ಈ ವಿದ್ಯಾರ್ಥಿನಿ, 3ನೇ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದು, ಮಕ್ಕಳ ರಾಷ್ಟ್ರೀಯ ಪ್ರಶಸ್ತಿ “ಪ್ರಧಾನ ಮಂತ್ರಿ ಬಾಲ ಪುರಸ್ಕಾರ್ – 2022” ಗಳಿಸಿರುತ್ತಾರೆ.

ಈ ಕಾರ್ಯಕ್ರಮಕ್ಕೆ ಗುಂಡೂರಾವ್, ಶಾಸಕ ವೇದವ್ಯಾಸ ಕಾಮತ್, ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ಅಭಿನಂದಿಸಿದ್ದಾರೆ.

ಅಂತರಾಷ್ಟ್ರೀಯ ಮನೋರಂಜನೆ ರಾಜ್ಯ ರಾಷ್ಟ್ರೀಯ ಶೈಕ್ಷಣಿಕ