ಕೇರಳದ ಕಣ್ಣೂರು ಸೆಂಟ್ರಲ್ ಜೈಲಿನಿಂದ ಶುಕ್ರವಾರ ಮುಂಜಾನೆ ಪರಾರಿಯಾದ ಅತ್ಯಾಚಾರ ಮತ್ತು ಕೊಲೆ ಅಪರಾಧಿ ಗೋವಿಂದಚಾಮಿ ಅಲಿಯಾಸ್ ಚಾರ್ಲಿ ಥಾಮಸ್‌ರನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. 2011ರ ಸೌಮ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈತ, ಮುಂಜಾನೆ ಸುಮಾರು 1:15ರ ಸುಮಾರಿಗೆ ಜೈಲಿನಿಂದ ಪರಾರಿಯಾಗಿದ್ದ. ಜೈಲಿನ ಶೀಟ್‌ಗಳನ್ನು ಹಗ್ಗವಾಗಿ ರೂಪಿಸಿಕೊಂಡು ಗೋಡೆಯನ್ನು ಏರಿ ಜೈಲಿನಿಂದ ತಪ್ಪಿಸಿಕೊಂಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಘಟನೆ ಬಳಿಕ ರಾಜ್ಯಾದ್ಯಾಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಅಪರಾಧಿಯ ಶೋಧಕ್ಕಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಿ ತೀವ್ರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕೊನೆಗೆ ಮುಂಜಾನೆ ಸುಮಾರು 10:40ರ ವೇಳೆಗೆ, ಕಣ್ಣೂರಿನ ತಳಾಪ್ ಪ್ರದೇಶದ ಒಂದು ಮನೆಯ ಪಕ್ಕದ ಬಾವಿಯೊಳಗೆ ಅಡಗಿದ್ದ ಗೋವಿಂದಚಾಮಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದರು.