ಮಂಗಳೂರು ಆಧಾರಿತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿಜ್ಡೋಮ್ ಫೌಂಡೇಶನ್ ಆಯೋಜಿಸಿದ್ದ ಗುರುಪೂರ್ಣಿಮೆ ದಿನದ ಗೌರವ ಸಮಾರಂಭದಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಪ್ರೊ. ಕೃಷ್ಣರಾಜ್ ಸುಳ್ಯರಿಗೆ “ಡೈನಾಮಿಕ್ ಪರ್ಸನಾಲಿಟಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಾರಂಭವು ಮಂಗಳೂರಿನ ಓಶಿಯನ್ ಪರ್ಸ್‌ನಲ್ಲಿ ಜರಗಿತು.

ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಯ್ದ ಸಾಧಕ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತಾಗಿದ್ದು, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆಗಾಗಿ ಪ್ರೊ. ಕೃಷ್ಣರಾಜ್ ರವರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರಿನ ಎಸಿಪಿ ಗೀತ ಕುಲಕರ್ಣಿ, ವಿಜ್ಡೋಮ್ ಫೌಂಡೇಶನ್ ಮುಖ್ಯಸ್ಥೆ ಡಾ. ಫ್ರಾನ್ಸಿಕ ತೇಜ್, ಡಾ. ಗುರುತೇಜ್, ಡಾ. ರುಕ್ಸನಾ ಹಾಸಿಮ್, ಡಾ. ರಾಘವೇಂದ್ರ ಹೊಳ್ಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೌಜನ್ಯ ಹೆಗ್ಡೆ ಅವರು ಮನೋಜ್ಞವಾಗಿ ನಿರೂಪಿಸಿದರು.