ಜುಲೈ 24:
ಭಾರತದ ಚೆಸ್ ಆಟಗಾರ್ತಿ ದಿವ್ಯ ದೇಶ್ಮುಕ್ ಅವರು ನೂತನ ದಾಖಲೆ ನಿರ್ಮಸಿದ್ದಾರೆ. ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್ಗೆ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಕೇವಲ 19 ವರ್ಷದ ದಿವ್ಯ, ಸೆಮಿಫೈನಲ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಟಾನ್ ಝೋಂಗ್ಯಿಯವರನ್ನು 1.5-0.5 ಅಂಕಗಳ ಅಂತರದಿಂದ ಸೋಲಿಸಿ ಚತುರಂಗ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.

ಈ ಜಯದೊಂದಿಗೆ ದಿವ್ಯ 2026ರ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ಗೆ ಆಯ್ಕೆಯಾಗಿದ್ದು, ಭಾರತೀಯ ಮಹಿಳಾ ಚೆಸ್ನಲ್ಲಿ ಇದು ಮಹತ್ವದ ಸಾಧನೆ.


ದೇಶದ ಯುವ ಪ್ರತಿಭೆ ದಿವ್ಯ ದೇಶ್ಮುಕ್ ಅವರ ಈ ಯಶಸ್ಸು ಇಡೀ ಭಾರತಕ್ಕೆ ಗರಿಮೆಯ ವಿಷಯವಾಗಿದ್ದು, ಅವರು ಅಂತಾರಾಷ್ಟ್ರೀಯ ಚೆಸ್ ವೇದಿಕೆಯಲ್ಲಿ ಭಾರತದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ.