ಪಾದಯಾತ್ರೆಯಲ್ಲಿ ಬರುತ್ತಿದ್ದಾರೆಯೇ ಎಸ್ ಐ ಟಿ ತಂಡ? 4ದಿನ ಕಳೆದರೂ ಧರ್ಮಸ್ಥಳ ತಲುಪದ ಅಧಿಕಾರಿಗಳು.

ಬೆಂಗಳೂರಿನಲ್ಲಿ ನಡೆಯುತ್ತಿದೆಯೇ ಧರ್ಮಸ್ಥಳದಲ್ಲಿ ಹೂತಿಟ್ಟ ಅಸ್ತಿ ಪಂಜರದ ತನಿಖೆ. ? ಹೀಗೆ ಪ್ರಶ್ನಿಸುತ್ತಿದ್ದಾರೆ ದಕ್ಷಿಣ ಕನ್ನಡದ ಜನ.
ಎತ್ತ ಸಾಗುತ್ತಿದೆ ಧರ್ಮಸ್ಥಳದ ಅತ್ಯಾಚಾರ ಕೊಲೆಗಳ ತನಿಖೆ.?
ಧರ್ಮಸ್ಥಳದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ಎಸ್‌ಐಟಿ ರಚನೆಯಾದರೂ ತನಿಖೆ ಪ್ರಾರಂಭವಾಗದೇ ವಿಳಂಬವಾಗುತ್ತಿರುವುದು ಸಾರ್ವಜನಿಕರಲ್ಲಿ ಗಂಭೀರ ಆತಂಕ ಹುಟ್ಟಿಸಿದೆ
ಪ್ರಶ್ನಿಸುವ ವ್ಯಕ್ತಿ, ಮಾಧ್ಯಮಗಳ ಮೇಲೆ ತಡೆ ಆಜ್ಞೆ , ಕೇಸು ದಾಖಲಿಸುವ ನಮ್ಮ ಕಾನೂನು, ನ್ಯಾಯಾಲಯ ನೈಜ ಆರೋಪಿಗಳ ಪರ ಮೌನ ಪಾಲಿಸಿದೆ.
ವ್ಯಕ್ತಿಯೊಬ್ಬ 164 ಹೇಳಿಕೆ ಕೊಟ್ಟು 15 ದಿನ ಕಳೆದರೂ ಒಂದು ಹೆಜ್ಜೆ ಮುಂದೆ ಹೋಗದ ತನಿಖೆ. ಜನಸಾಮಾನ್ಯರಿಗೆ ಒಂದು ನ್ಯಾಯ ಉಳ್ಳವರಿಗೆ ಒಂದು ನ್ಯಾಯ ಹೀಗಾಗಿದೆ ನಮ್ಮ ನ್ಯಾಯಾಂಗದ ವ್ಯವಸ್ಥೆ.
ಜನರ ಒತ್ತಾಯಕ್ಕೆ ಮಣಿದು ಸರಕಾರ ಎಸ್ ಐ ಟಿ ರಚನೆ ಮಾಡಿ ಕೈ ತೊಳೆದುಕೊಂಡಿದೆ. ಎಸ್ ಐ ಟಿ ತಂಡದಲ್ಲಿ ಇರುವ ಸದಸ್ಯರ ಇರುವಿಕೆಯೇ ಮಾಹಿತಿ ಇಲ್ಲದ ಗೃಹ ಸಚಿವರನ್ನು ಪಡೆದ ಕರ್ನಾಟಕದ ಜನರು ಧನ್ಯರು ಎಂದು ಜನ ಬೀದಿಯಲ್ಲಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜಕೀಯ ಪಕ್ಷಗಳು , ಸಂಘಟನೆಗಳು ಕೇವಲ ಆಚೆಯಿಂದ ಈಚೆ ಈಚೆಯಿಂದ ಆಚೆ ಕೆಸರು ಎರಚೊಡು ಬಿಟ್ಟು ಬೇರೇನೂ ಮಾಡುತ್ತಾ ಇಲ್ಲ ಹೀಗೆ ಹೋದರೆ ನ್ಯಾಯ ಸಿಗುವುದು ಸಾಧ್ಯವಿಲ್ಲ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.