ಧರ್ಮಸ್ಥಳದಲ್ಲಿ ಶವಗಳನ್ನು ಬಲವಂತವಾಗಿ ಹೂತಿಟ್ಟ ಆರೋಪ ಸಂಬಂಧಿಸಿದ ಕೇಸ್ ಇದೀಗ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ವರ್ಗಾವಣೆಗೊಂಡಿದೆ.



ಈ ಎಸ್‌ಐಟಿ ತಂಡದಲ್ಲಿ ಒಟ್ಟು ನಾಲ್ಕು ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅನುಚೇತ್ ಸೌಮ್ಯಾಲತ ಮತ್ತು ಜಿತೇಂದ್ರ ಕುಮಾರ್ ಅವರು ಈ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.
ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ 1994ರ ಬ್ಯಾಚ್‌ನ ಹಿರಿಯ ಮತ್ತು ಅನುಭವೀ ಅಧಿಕಾರಿಯಾಗಿ ಹಲವಾರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕದ ಪೊಲೀಸ್ ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿ (ADGP) ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ, ಸಿಐಡಿನ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ವ್ಯಸನ ನಿಯಂತ್ರಣ ವಿಭಾಗಗಳನ್ನೂ ಅವರ ನೇತೃತ್ವದಲ್ಲಿ ಇಡಲಾಗಿದೆ.
ಇತ್ತೀಚೆಗಷ್ಟೆ ಅವರನ್ನು ಡಿಜೆಪಿ (DGP) ಹುದ್ದೆಗೆ ಬಡ್ತಿ ನೀಡಲಾಗಿದ್ದು, ಇದು ಅವರ ವೃತ್ತಿಜೀವನದ ಮತ್ತೊಂದು ಪ್ರಮುಖ ಮೆಟ್ಟಿಲಾಗಿದೆ. ಅವರ ಕಾರ್ಯವೈಖರಿ ನಿರ್ದಿಷ್ಟವಾಗಿ ಸೈಬರ್ ಅಪರಾಧಗಳ ತಡೆಗೆ ಹಾಗೂ ಆರ್ಥಿಕ ಅಪರಾಧ ತನಿಖೆಯಲ್ಲಿ ಮೆರೆದಿದೆ. ಡ್ರೋನ್ ಡೇಟಾ ಕಳ್ಳತನ ಪ್ರಕರಣ ಮತ್ತು ಇತರೆ ಸೈಬರ್ ದಾಳಿ ಪ್ರಕರಣಗಳಲ್ಲಿ ಅವರು ನೇತೃತ್ವ ವಹಿಸಿ ಯಶಸ್ವಿಯಾಗಿ ತನಿಖೆ ನಡೆಸಿದ್ದಾರೆ.
ಹಲವಾರು ನವೀನ ತಂತ್ರಜ್ಞಾನಗಳ ಬಳಕೆ ಮೂಲಕ ಪೊಲೀಸ್ ಇಲಾಖೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಪ್ರಣವ್ ಮೊಹಂತಿಯವರು ಮಹತ್ವದ ಪಾತ್ರವಹಿಸಿದ್ದಾರೆ. ಈಗ ಅವರು ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ವಿಶೇಷ ತನಿಖಾ (SIT) ತಂಡದ ನೇತೃತ್ವ ವಹಿಸುತ್ತಿದ್ದಾರೆ.