ನವ ದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಗೆ 10 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ MyGov India ಪ್ಲಾಟ್‌ಫಾರ್ಮ್ “A Decade of Digital India – Reel Contest” ಅನ್ನು ಘೋಷಿಸಿದೆ. ಈ ಸ್ಪರ್ಧೆಯು ನೂತನ ಸೃಜನಾತ್ಮಕತೆಯೊಂದಿಗೆ ನಾಗರಿಕರ ಅನುಭವವನ್ನು ಹಂಚಿಕೊಳ್ಳುವ ಮಹತ್ತರ ಅವಕಾಶವಾಗಿದೆ.

ಈ ರೀಲ್ಸ್ ಸ್ಪರ್ಧೆಯ ಮೂಲಕ ನಾಗರಿಕರು ತಮ್ಮ ವೈಯಕ್ತಿಕ ಕಥೆಗಳನ್ನೂ, ಡಿಜಿಟಲ್ ಇಂಡಿಯಾ ಅವರ ಬದುಕಿನಲ್ಲಿ ತಂದ ಬದಲಾವಣೆಗಳನ್ನೂ ಹಂಚಿಕೊಳ್ಳಬಹುದು. ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ಬಳಸಿರುವ ಅನುಭವ, ಡಿಜಿಟಲ್ ಶಿಕ್ಷಣ, ಆರೋಗ್ಯ, ಹಣಕಾಸು ಸೇವೆಗಳ ಲಾಭ, ಅಥವಾ ಗವರ್ನನ್ಸ್ ಸೌಲಭ್ಯ – ಡಿಜಿಟಲ್ ಇಂಡಿಯಾ ನಿಮ್ಮ ಬದುಕಿಗೆ ತಂದ ಬದಲಾವಣೆಗಳ ಕುರಿತು ರೀಲ್ ಮಾಡಬಹುದು.
ಭಾಗವಹಿಸುವ ವಿಧಾನ:
1 ನಿಮಿಷ ರೀಲನ್ನು ಸೃಷ್ಟಿಸಿ, ಡಿಜಿಟಲ್ ಇಂಡಿಯಾ ನಿಮ್ಮ ಬದುಕಿಗೆ ತಂದ ಬದಲಾವಣೆಗಳ ಕುರಿತು ಹೇಳಿ.
ಈ ವಿಷಯಗಳನ್ನು ಒಳಗೊಂಡಿರಬಹುದು:
- ಸಾರ್ವಜನಿಕ ಸೇವೆಗಳು ಹೇಗೆ ಸುಲಭವಾಗಿದೆ.
- UMANG, DigiLocker, BHIM UPI, eHospital ನಂತಹ ಪ್ಲಾಟ್‌ಫಾರ್ಮ್‌ಗಳ ಉಪಯೋಗ.
- ಶಿಕ್ಷಣ, ಆರೋಗ್ಯ, ಡಿಜಿಟಲ್ ಪಾವತಿಗಳು, ಉದ್ಯಮಶೀಲತೆ ಮುಂತಾದ ಕ್ಷೇತ್ರಗಳಲ್ಲಿ ಡಿಜಿಟಲ್ ಇಂಡಿಯಾದ ಪಾತ್ರ.
- ಡಿಜಿಟಲ್ ಸೇರ್ಪಡೆಯಿಂದ ಬದಲಾಗಿದ ಕುಟುಂಬ ಅಥವಾ ಸಮುದಾಯದ ಕಥೆ.
ಸಲ್ಲಿಸಲು ಗೈಡ್‌ಲೈನ್ಸ್:
- ಭಾಗವಹಿಸುವವರು ಭಾರತೀಯ ನಾಗರಿಕರಾಗಿರಬೇಕು.
- ರೀಲ್ ಉದ್ದ 1 ನಿಮಿಷ ಮಾತ್ರ.
- ಹೈ ರೆಸಲ್ಯೂಷನ್ ಇರಬೇಕು.
- ಮೂಲತಃ ನಿಮ್ಮದೇ ಆಗಿರಬೇಕು ಮತ್ತು ಇನ್ನೆಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾಗಿಲ್ಲದೇ ಇರಬೇಕು.
- ಭಾಷೆ: ಇಂಗ್ಲಿಷ್, ಹಿಂದಿ, ಅಥವಾ ಯಾವುದೇ ಪ್ರಾದೇಶಿಕ ಭಾಷೆ (ಸಾಧ್ಯವಾದರೆ ಕ್ಯಾಪ್ಶನ್ ಸಹಿತ)
- ಪೋರ್ಟ್ರೇಟ್ ಮೋಡ್ ನಲ್ಲಿ ಇರಬೇಕು.
- MP4 ಫೈಲ್ ಆಗಿರಬೇಕು.
ಬಹುಮಾನಗಳು
🏆 ಪ್ರಥಮ 10 ವಿಜೇತರಿಗೆ ₹15,000/-
🥈 ಮುಂದಿನ 25 ವಿಜೇತರಿಗೆ ₹10,000/-
🥉 ಮುಂದಿನ 50 ವಿಜೇತರಿಗೆ ₹5,000/-
ಭಾಗವಹಿಸಲು ಕೊನೆಯ ದಿನಾಂಕ: ಆಗಸ್ಟ್ 1, ರಾತ್ರಿ 11:45ರೊಳಗೆ.