“ಸಿಎಂ ಸಿದ್ದರಾಮಯ್ಯ ಇನ್ನಿಲ್ಲ – ಫೇಸ್‌ಬುಕ್‌ನ ದೋಷಪೂರ್ಣ ಭಾಷಾಂತರಕ್ಕೆ ಕ್ಷಮೆಯಾಚನೆ!

“ಸಿಎಂ ಸಿದ್ದರಾಮಯ್ಯ ಇನ್ನಿಲ್ಲ – ಫೇಸ್‌ಬುಕ್‌ನ ದೋಷಪೂರ್ಣ ಭಾಷಾಂತರಕ್ಕೆ ಕ್ಷಮೆಯಾಚನೆ!

ಬೆಂಗಳೂರು: “CM Siddaramaiah passed away” ಎಂದು ದೋಷಪೂರ್ಣವಾಗಿ ಭಾಷಾಂತರಿಸಿದ ಫೇಸ್‌ಬುಕ್ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಈ ದೋಷ ಬಳಕೆದಾರರಲ್ಲಿ ಗೊಂದಲ ಸೃಷ್ಟಿಸಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಷಯದ ಹಿನ್ನೆಲೆ, ಸಿಎಂ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮೆಟಾ ಸಂಸ್ಥೆಗೆ ಅಧಿಕೃತ ಪತ್ರ ಬರೆದು ತಕ್ಷಣ ಸರಿಪಡಣೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಫೇಸ್‌ಬುಕ್‌ ನ ಮಾಲಕ ಸಂಸ್ಥೆಯಾದ ಮೆಟಾ, “ಅನುವಾದ ದೋಷಗಳಿಗೆ ಕಾರಣವಾದ ಅಂಶಗಳನ್ನು ನಾವು ಈಗಾಗಲೇ ಸರಿಪಡಿಸಿದ್ದೇವೆ. ಈ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಮತ್ತು ಕ್ಷಮೆ ಕೇಳುತ್ತೇವೆ” ಎಂದು ಸ್ಪಷ್ಟಪಡಿಸಿದೆ.

ಇಂತಹ ತಪ್ಪು ಅನುವಾದಗಳು ನಿಜವಾದ ಅರ್ಥವನ್ನು ತಲೆಕೆಳಗಾಗಿಸುವುದರ ಜೊತೆಗೆ, ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಇವು ಅಧಿಕೃತ ಸಂವಹನಗಳಲ್ಲಿ ನಡೆದರೆ ಅಪಾಯಕಾರಿಯೂ ಆಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದಾರೆ.

ಅಂತರಾಷ್ಟ್ರೀಯ ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ