ಧರ್ಮಸ್ಥಳದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾ ರೆಡ್ಡಿ ಅವರು ವೀರೇಂದ್ರ ಹೆಗ್ಗಡೆ ಅವರು ತಕ್ಷಣ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಅವರ ಊರಿನಲ್ಲಿ ಈ ತರ ಘಟನೆಯಾಗಿದೆ ಎಂದು ತಿಳಿದಾಗ ಅವರೇ ಮುಂದೆ ನಿಂತು ತನಿಖೆ ಮಾಡಿಸಬೇಕಿತ್ತು. ಅದು ಬಿಟ್ಟು ಯೂಟ್ಯೂಬ್ ಚಾನಲ್ ಗಳನ್ನು ಬ್ಲಾಕ್ ಮಾಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಿಂದ ಕುಂಬಳಕಾಯಿ ಕಳ್ಳ ಎಂದಾಗ ಹೆಗಲು ಮುಟ್ಟಿಕೊಂಡು ನೋಡಿದ ಹಾಗೆ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಪಕ್ಷದ 4.5 ಲಕ್ಷ ಫಾಲೋವರ್ಸ್ ಇದ್ದ ಚಾನೆಲ್ ಸಹಿತ ಸಾವಿರಾರು ಯೂಟ್ಯೂಬ್ ಚಾನೆಲ್ ಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಹಾಗಾಗಿ ಅವರು ಪ್ರಜಾಪ್ರಭುತ್ವದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ಆದ್ದರಿಂದ ಅವರು ರಾಜ್ಯ ಸಭೆ ಸದಸ್ಯರಾಗಿರುವುದೇ ಅವಮಾನ ಎಂದು ವಾಗ್ದಾಳಿ ಮಾಡಿದ್ದಾರೆ. ಸ್ವತಃ ಗ್ರಾಮಪಂಚಾಯತಿ ಉಪಾಧ್ಯಕ್ಷ ಪತ್ರಿಕಾಗೋಷ್ಠಿ ಧಪನ ಮಾಡಿದನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ತಕ್ಷಣ ಬಂಧಿಸಿ ತನಿಖೆ ಕೈಗೊಳ್ಳಬೇಕು.
ಅನಾಥ ಶವ ದೊರೆತಾಗ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ಮಾದ್ಯಮಕ್ಕೆ ತಿಳಿಸಿ ವಾರಸುದಾರರು ಬರದೇ ಹೋದರೆ ನಂತರ ಕಾನೂನು ಪ್ರಕಾರ ಸ್ಮಶಾನದಲ್ಲಿ ಹೂಳಬೇಕು. ಅದೆಲ್ಲವೂ ನಡೆಸದೆ ಕಾನೂನು ಬಾಹಿರವಾಗಿ ಧಪನ ಮಾಡಿದ ಎಲ್ಲಾ ಶವವನ್ನು ಹೊರತೆಗೆದು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

