ಧರ್ಮಸ್ಥಳದಲ್ಲಿ ನಡೆದ ಹಲವು ಅತ್ಯಾಚಾರ ಕೊಲೆಗಳ ಬಗ್ಗೆ ವರದಿ ಮಾಡುತ್ತಿದ್ದ ಪ್ರಮುಖ ಯೂಟ್ಯೂಬ್ ಚಾನಲ್ ಗಳು, ವಿಡಿಯೋಗಳನ್ನು ಬ್ಲಾಕ್ ಮಾಡಿಸುವ ಮೂಲಕ ಹೊರಾಟವನ್ನು ದಮನ ಮಾಡುವ ಕೆಲಸಗಳು ನಡೆಯುತ್ತಿದೆ.

ಈ ಪೈಕಿ ಪ್ರಮುಖವಾಗಿ ಈ ದಿನ ಡಾಟ್ ಕಾಮ್, ಕುಡ್ಲ ರಾಂಪೇಜ್ ಪ್ಲಸ್, ಸಂಚಾರಿ ಸ್ಟುಡಿಯೋ ಪ್ಲಸ್ ಚಾನೆಲ್ ಗಳು ಬ್ಲಾಕ್ ಆಗಿದ್ದು ಥರ್ಡ್ ಐ ಚಾನೆಲ್ ನ ಹಲವು ವಿಡಿಯೋಗಳು ಜಿಯೋಗ್ರಾಫಿಕಲ್ ಬ್ಲಾಕ್ ಆಗಿದೆ.
ಈ ಬಗ್ಗೆ ಥರ್ಡ್ ಐ ಚಾನೆಲ್ ನ ಮುಖ್ಯಸ್ಥ ಸುಬ್ರಹ್ಮಣ್ಯ ಹಂಡಿಗೆ ವಿಡಿಯೋ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡೆ ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಹಲವು ವಿಡಿಯೋಗಳು, ಚಾನೆಲ್ ಗಳು ಬ್ಲಾಕ್ ಆಗಿದ್ದು ಕಂಟೆಂಟ್ ಕ್ರಿಯೇಟರ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕನ್ನಡ ಸುದ್ದಿ ವಾಹಿನಿಗಳು ಜಾಣ ಕುರುಡನ್ನು ಪ್ರದರ್ಶಿಸುತ್ತಿರುವ ಈ ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್ ಗಳು ತಮ್ಮ ವರದಿಗಳ ಮೂಲಕ ಜನರಿಗೆ ಸತ್ಯದ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈಗ ಈ ಚಾನೆಲ್ ಗಳನ್ನು ಬ್ಲಾಕ್ ಮಾಡಿಸುವ ಮೂಲಕ ಕಾಣದ ಕೈಗಳು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದಲ್ಲಿದೆ.
ಈಗಲೇ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿದ್ದು ನೆರೆಯ ಕೇರಳ ರಾಜ್ಯದ ಮಾಧ್ಯಮಗಳು ಕೂಡ ಈ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದೆ. ಅಪರಾಧಿಗಳು ಎಷ್ಟೇ ಶಕ್ತಿಶಾಲಿಯಾದರೂ ಒಂದಲ್ಲ ಒಂದು ದಿನ ಸತ್ಯಕ್ಕೆ , ಕಾನೂನಿಗೆ ತಲೆ ಬಾಗಲೇ ಬೇಕು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

