ನೂರಾರು ಯುವತಿಯರ ದೇಹವನ್ನು ಧರ್ಮಸ್ಥಳದಲ್ಲಿ ಧಪನ ಮಾಡಿದ್ದೇನೆ ಎಂದು ಹೇಳಿಕೆ ಕೊಟ್ಟ ವ್ಯಕ್ತಿ ತನ್ನ ಬಳಿ ಇರುವ ಅಸ್ತಿಪಂಜರವನ್ನು ಪೊಲೀಸರಿಗೆ ಕೊಟ್ಟು 15 ದಿನ ಕಳೆದರೂ ಇನ್ನೂ ವ್ಯಕ್ತಿ ಹೇಳಿದ ಸ್ಥಳದಲ್ಲಿ ಅಗೆದು ತನಿಖೆ ನಡೆಸಲು ವಿಳಂಬ ಮಾಡುತ್ತಿರುವ ಪೊಲೀಸ್ ಇಲಾಖೆ ವಿರುದ್ಧ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಕೆ ವಿ ಧನಂಜಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅವರು ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತಾಡಿದ್ದು, ತಾವು ಕೇರಳ ಸರಕಾರಕ್ಕೆ ವಿಶೇಷ ತನಿಖೆ ನಡೆಸುವಂತೆ ಬರೆದಿರುವ ಪತ್ರದ ಕುರಿತು ವಿವರಣೆ ನೀಡಿ ಕರ್ನಾಟಕ ಸರ್ಕಾರ ಪಾರದರ್ಶಕ ತನಿಖೆ ನಡೆಸದೆ ಇರುವ ಕಾರಣ ಹಾಗೂ ಕೇರಳ ರಾಜ್ಯದಿಂದ ಬಂದ ವ್ಯಕ್ತಿಗಳು ಕೂಡ ಇಲ್ಲಿ ಅಸಹಜ ಸಾವನಪ್ಪಿದ ಬಗ್ಗೆ ಅನುಮಾನವಿದ್ದು ಕೇರಳ ಸರ್ಕಾರ ಕೂಡ ಕಾನೂನು ಅಡಿಯಲ್ಲಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನ ಅನುಮತಿ ಪಡೆಯ ಬಹುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ತನಿಖಾಧಿಕಾರಿ ತನ್ನ ವಿವೇಚ ನೆಯಂತೆ ಕೆಲಸ ಮಾಡುತ್ತಾರೆ ಎನ್ನುವ ದಕ್ಷಿಣ ಕನ್ನಡ ಎಸ್ ಪಿ ಅವರು ಹೇಳಿದ ಹೇಳಿಕೆಯನ್ನು ಖಂಡಿಸಿ, 15 ದಿನ ಕಳೆದರೂ ಇನ್ನೂ ಸ್ಥಳ ಮಹಜರು ಮಾಡದೇ ವಿಳಂಬ ನೀತಿ ಅನುಸರಿಸುವುದು ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಎಂಬ ಸಂಶಯ ವ್ಯಕ್ತ ಪಡಿಸಿದ್ದಾರೆ. ಒಂದುವೇಳೆ ಸಾಕ್ಷಿದಾರ ಸುಳ್ಳು ಹೇಳಿದ್ದು ಆಗಿದ್ದರೆ ತಕ್ಷಣ ಸ್ಥಳ ಮಹಜರು ನಡೆಸಿ ಸತ್ಯ ತಿಳಿಯುವಂತೆ ಮಾಡುವ ಅವಕಾಶವಿದ್ದರೂ ಯಾಕೆ ವಿಳಂಬ ಮಾಡುತ್ತಿದ್ದಾರೆ ? ಇದರ ಅರ್ಥ ವ್ಯಕ್ತಿಯ ಹೇಳಿಕೆಯಲ್ಲಿ ಸತ್ಯ ಅಡಗಿದೆ ಎಂದು ಜನ ಸಾಮಾನ್ಯರಿಗೂ ತಿಳಿಯುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

