ಟೆಸ್ಲಾ ಭಾರತ ಪ್ರವೇಶ – ಮುಂಬೈನಲ್ಲಿ ಮೊದಲ ಶೋರೂಮ್ ಉದ್ಘಾಟನೆ

ಟೆಸ್ಲಾ ಭಾರತ ಪ್ರವೇಶ – ಮುಂಬೈನಲ್ಲಿ ಮೊದಲ ಶೋರೂಮ್ ಉದ್ಘಾಟನೆ

ಎಲಾನ್ ಮಸ್ಕ್‌ನ ಟೆಸ್ಲಾ ಕಂಪನಿಯು ಇಂದು ಭಾರತದಲ್ಲಿ ತನ್ನ ಪ್ರಥಮ ಶೋರೂಮ್‌ ಅನ್ನು ಅಧಿಕೃತವಾಗಿ ಆರಂಭಿಸಿದ್ದು, ಮುಂಬೈ ನಗರದ ಬಾಂದ್ರಾ ಕುರ್ಲಾ ಕಾನ್ಪ್ಲೆಕ್ಸ್‌ನಲ್ಲಿ ಈ ಶೋರೂಮ್‌ ಉದ್ಘಾಟಿಸಲಾಗಿದೆ. ಇದನ್ನು ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಟೆಸ್ಲಾ ನೀಡಿರುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಹಲವು ವರ್ಷಗಳ ತಂತ್ರಶೀಲ ಮಾತುಕತೆ, ನೀತಿ ಬದಲಾವಣೆ ಹಾಗೂ ಮಾರುಕಟ್ಟೆ ಸಿದ್ಧತೆಯ ಬಳಿಕ ಕಂಪನಿಯು ಈ ಹೊಸ ಅಧ್ಯಾಯವನ್ನು ಆರಂಭಿಸಿದೆ.

ಉದ್ಘಾಟನೆ ಸಮಾರಂಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು “ಟೆಸ್ಲಾ ಸರಿಯಾದ ನಗರ ಮತ್ತು ರಾಜ್ಯವನ್ನು ಆಯ್ಕೆ ಮಾಡಿದೆ – ಅಂದರೆ ಉದ್ಯಮಶೀಲತೆಯ ರಾಜಧಾನಿಯಾದ ಮುಂಬೈ ಮತ್ತು ಮಹಾರಾಷ್ಟ್ರ,” ಎಂದು ಹೇಳಿದ್ದಾರೆ. ಶೋರೂಮ್‌ನೊಳಗೆ ಮೊಟ್ಟಮೊದಲದ ನೋಟವನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದ್ದು, ಇದು ಅತ್ಯಾಧುನಿಕ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿದೆ.

ಟೆಸ್ಲಾ ತನ್ನ Model Y ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇದರಲ್ಲಿ Long Range RWD ಮತ್ತು Long Range AWD ಎಂಬ ಎರಡು ಮಾದರಿಗಳು ಲಭ್ಯವಿವೆ. ಕಾರು ಡಾರ್ಕ್ ಗ್ರೇ ಬಣ್ಣದಲ್ಲಿದ್ದು, ಕಪ್ಪು ಅಲಾಯ್ ಚಕ್ರಗಳು ಹಾಗೂ ಕಪ್ ಶೈಲಿಯ ವಿನ್ಯಾಸ ಹೊಂದಿದೆ. ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬ್ಲಾಕ್ ಮತ್ತು ವೈಟ್ ಇಂಟೀರಿಯರ್, 15.4 ಇಂಚಿನ ಟಚ್ ಸ್ಕ್ರೀನ್, ವೈರ್‌ಲೆಸ್ ಚಾರ್ಜಿಂಗ್, ಯುಎಸ್ಬಿ ಸಿ ಪೋರ್ಟ್‌ಗಳು, ವಾಯ್ಸ್ ಕಮಾಂಡ್, ಇಂಟರ್ನೆಟ್ ಸಂಪರ್ಕ ಮತ್ತು ಆ್ಯಪ್ ಆಧಾರಿತ ಪ್ರವೇಶ ವ್ಯವಸ್ಥೆ ಇದ್ದು, ಬೆಲೆ ₹60 ಲಕ್ಷಕ್ಕೂ ಹೆಚ್ಚಿನಾಗಿರುವ ನಿರೀಕ್ಷೆಯಿದೆ.

ತಂತ್ರಜ್ಞಾನ ವಾಹನ ಸುದ್ದಿ