ಲಾರ್ಡ್ಸ್‌ನಲ್ಲಿ ಭಾರತದ ಗೆಲುವಿನ ಕನಸು ಕಸಿದ ಇಂಗ್ಲೆಂಡ್ – ಇಂಗ್ಲೆಂಡ್ ಗೆ 2-1 ಮುನ್ನಡೆ

ಲಾರ್ಡ್ಸ್‌ನಲ್ಲಿ ಭಾರತದ ಗೆಲುವಿನ ಕನಸು ಕಸಿದ ಇಂಗ್ಲೆಂಡ್ – ಇಂಗ್ಲೆಂಡ್ ಗೆ 2-1 ಮುನ್ನಡೆ

ಇಂಗ್ಲೆಂಡ್ ನ ಪ್ರಸಿದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 22 ರನ್‌ಗಳ ರೋಚಕ ಜಯವನ್ನು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.

ಭಾರತಕ್ಕೆ ನಾಲ್ಕನೇ ಇನಿಂಗ್ಸ್‌ನಲ್ಲಿ 193 ರನ್ ಗುರಿಯಾಗಿತ್ತು. ಆದರೆ ಕೊನೆಯ ಸೆಷನ್‌ನಲ್ಲಿ ಭಾರತ 170 ರನ್‌ಗಳಿಗೆ ಆಲೌಟ್ ಆಯಿತು. ಭಾರತವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದ ರವೀಂದ್ರ ಜಡೇಜಾ ಅವರು 61 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರೂ, ಇತರ ಆಟಗಾರರಿಂದ ಬೆಂಬಲ ಸಿಗದೆ ಭಾರತದ ನಿರೀಕ್ಷೆ ನಿರಾಸೆಯಾಯಿತು.

ಆಫ್ಸ್‌ಪಿನ್ನರ್ ಶೋಯೆಬ್ ಬಶೀರ್ ಅವರು ಬಹುಪಾಲು ಸಮಯ ಗಾಯದ ಕಾರಣದಿಂದ ಮೈದಾನದಿಂದ ದೂರವಿದ್ದರೂ, ನಿರ್ಣಾಯಕ ಕ್ಷಣದಲ್ಲಿ ಬಂದು ಮೊಹಮ್ಮದ್ ಸಿರಾಜ್ ವಿಕೆಟ್ ತೆಗೆದು ಇಂಗ್ಲೆಂಡ್ ಗೆಲುವನ್ನು ಪಕ್ಕಾ ಮಾಡಿದರು.

ಇನ್ನೂ 3 ನೇ ಟೆಸ್ಟ್ ಪಂದ್ಯದ ವಿಶೇಷತೆ ಎಂದರೆ, ಮೊದಲ ಇನಿಂಗ್ಸ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ಸಮಾನವಾಗಿ 387 ರನ್ ಗಳಿಸಿ ಆಟದ ಸಮತೋಲನವನ್ನು ನಿರ್ವಹಿಸಿದ್ದವು. ಅಂತಿಮ ಇನಿಂಗ್ಸ್‌ನಲ್ಲಿ ತೀವ್ರ ಸ್ಪರ್ಧೆ ನಡೆಯಿ, ಪ್ರತಿ ಕ್ಷಣವೂ ಥ್ರಿಲ್ಲಿಂಗ್‌ ನಲ್ಲಿ ಸಾಗಿತ್ತು. ಅಂತಿಮವಾಗಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಅಭಿಮಾನಿಗಳ ಎದುರಿನಲ್ಲೇ ಆತಿಥೇಯರು ಜಯದ ಪತಾಕೆ ಹಾರಿಸಿದರು.

ಕ್ರೀಡೆ