ಇಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 50ನೇ ವರ್ಧಂತೀ

ಇಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 50ನೇ ವರ್ಧಂತೀ

ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸುವರ್ಣ ವರ್ಧಂತೀ ಗೋಕರ್ಣದ ಅಶೋಕೆಯಲ್ಲಿ ಮಠದ ಶಿಷ್ಯರಿಂದ ವಿಶೇಷವಾಗಿ ಆಚರಿಸಲಾಯಿತು.

ಸಾವಿರಾರು ಮಾತೆಯರಿಂದ ಕುಂಕುಮಾರ್ಚನೆ ಸೇವೆ ಮತ್ತು ಹವ್ಯಕ ಮಹಾಮಂಡಲದ ಶಿಷ್ಯರಿಂದ ಮಹಾರುದ್ರ ಪಾರಾಯಣ ನೆರವೇರಿತು. ಹಾಗೂ ಈ ವಿಶೇಷ ದಿನದಂದು 50 ಸಾವಿರ ಗಿಡಗಳನ್ನು ನೆಟ್ಟು ಪೋಷಿಸುವ ನಿರ್ಧಾರದೊಂದಿಗೆ ಮಠದ ಶಿಷ್ಯರು 50ನೇ ವರ್ಧಂತೀಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಶ್ರೀಗಳವರ ವರ್ಧಂತೀ ಪ್ರಯುಕ್ತ ವೈದಿಕರಿಂದ ಅರುಣಪ್ರಶ್ನಪಾರಾಯಣ, ನವಗ್ರಹ ಶಾಂತಿ, ಅರುಣ ಹವನ, ಆಯುಷ್ಯ ಸೂಕ್ತ ಹವನ, ಶಿವಗುರುಕುಲದ ಸಲುವಾಗಿ ವೇದನಿಧಿಯ ಮಹಾಸಮರ್ಪಣೆ (ಸದಾಶಯ)
*ಮಾತೆಯರಿಂದ ಸಹಸ್ರ ಕುಂಕುಮಾರ್ಚನೆ ಹಾಗೂ ಸೇವಾ ಕಾಣಿಕೆ ಸಮರ್ಪಣೆ (ವಾತ್ಸಲ್ಯಧಾರೆ)
*ಮಾತೃತ್ವಮ್‌ನಿಂದ ಗೋಗ್ರಾಸ ಸಮರ್ಪಣೆ
*ಸುವರ್ಣ ವರ್ಧಂತಿ ಸುಸಮಯದಲ್ಲಿ ಶಿಷ್ಯಭಕ್ತರಿಂದ 50000 ಗಿಡಗಳನ್ನು ನೆಡುವ ಘೋಷಣೆ (ಸಸ್ಯಾರೋಪಣ ಮತ್ತು ಸಸ್ಯವಿತರಣ)
*ಶಿಷ್ಯಭಕ್ತರಿಂದ ಮಹಾರುದ್ರ ಪಾರಾಯಣ, ಗುರು~ಅರುಣ ನಮಸ್ಕಾರ
*ಸರ್ವಸೇವೆ: ಶ್ರೀ ಜಿ. ಭೀಮೇಶ್ವರ ಜೋಷಿ ಮತ್ತು ಕುಟುಂಬದವರು, ಶ್ರೀಕ್ಷೇತ್ರ ಹೊರನಾಡು ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭದಲ್ಲಿ ಶ್ರೀಗಳವರು- ವರ್ಧಂತೀ ಎಂದರೆ ಬೆಳವಣಿಗೆ. ಈ ದಿನ ಶಿಷ್ಯರಿಂದ ಸಮರ್ಪಣೆಯಾದ ಎಲ್ಲಾ ಮೌಲ್ಯವು ವಿಷ್ಣುಗುಪ್ತ ವಿದ್ಯಾಪೀಠದ ಗುರುಕುಲಗಳಿಗೆ ಸೇರುತ್ತದೆ. ಗುರುಕುಲಗಳು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆದು ಸಹಸ್ರಾರು ಶ್ರೇಷ್ಠ ಮಾತೆಯರು ಮತ್ತು ಮಹನೀಯರನ್ನು ಸಮಾಜಕ್ಕೆ ನೀಡುವಂತಾಗಬೇಕು ಎಂದು ಆಶೀರ್ವದಿಸಿದರು.

ಈ ವಿಶೇಷ ದಿನದ ಭಿಕ್ಷೆ ಹಾಗೂ ಸರ್ವ ಸೇವೆಯು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ವತಿಯಿಂದ ನೆರವೇರಿತು.

ಆಧ್ಯಾತ್ಮ ಧಾರ್ಮಿಕ ರಾಜ್ಯ