ಬೆಳ್ತಂಗಡಿ, ಜುಲೈ 11: “ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತಿದ್ದೇನೆ” ಎಂಬ ಅಚ್ಚರಿಯ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದ್ದ ವ್ಯಕ್ತಿ ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದರು.ಈ ಪ್ರಕರಣವು ವ್ಯಕ್ತಿಯು ಸಂಸದನಿಗೆ ಪತ್ರ ಬರೆದ ಕಾರಣದಿಂದ ಬೆಳಕಿಗೆ ಬಂದಿದ್ದು, ಅವನ ಹೇಳಿಕೆಯಲ್ಲಿ ಕೆಲವು ಅಂಶಗಳು ಸಂಶಯಾಸ್ಪದವಾಗಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.


ಪೊಲೀಸರು ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಇಂದು ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾಗಿ ಮೂಲಗಳು ತಿಳಿಸಿವೆ. ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಕ್ಕಾಗಿ ವಿಚಾರಣೆ ಮುಂದುವರೆಸಿದೆ.
ವ್ಯಕ್ತಿಯ ಈ ಹೇಳಿಕೆಯಿಂದ ಸೌಜನ್ಯ ಸೇರಿದಂತೆ ಹಲವು ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಮತ್ತೆ ಮರುಜೀವ ಬಂದಂತಾಗಿದೆ. ತನಿಖೆ ಸೂಕ್ತ ರೀತಿಯಲ್ಲಿ ನಡೆದರೆ ತೆರೆಮರೆಯಲ್ಲಿರುವ ಅಪರಾಧಿಗಳು ಕಾನೂನು ಶಿಕ್ಸೆಗೆ ಗುರಿಯಾಗಬಹುದು ಎಂಬ ನಿರೀಕ್ಷೆ ಇದೆ.ಒಂದುವೇಳೆ ಈ ತನಿಖೆಯೂ ಪರಿಭಾವಿಗಳ ಒತ್ತಡಕ್ಕೆ ಸಿಲುಕಿ ತನಿಖೆಯ ಹಾದಿ ತಪ್ಪಿದರೆ ನ್ಯಾಯ ಮತ್ತೆ ಮರೀಚಿಕೆಯಾಗಲಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.