ನಾಳೆ ಭಾರತ ಬಂದ್? 25 ಕೋಟಿಗೂ ಹೆಚ್ಚು ಉದ್ಯೋಗಿಗಳ ರಾಷ್ಟ್ರವ್ಯಾಪಿ ಮುಷ್ಕರ

ನಾಳೆ ಭಾರತ ಬಂದ್? 25 ಕೋಟಿಗೂ ಹೆಚ್ಚು ಉದ್ಯೋಗಿಗಳ ರಾಷ್ಟ್ರವ್ಯಾಪಿ ಮುಷ್ಕರ

ನವದೆಹಲಿ: ಜುಲೈ 9ರಂದು (ನಾಳೆ) ದೇಶವ್ಯಾಪಿ ಭಾರತ ಬಂದ್ ಗೆ ಕರೆ ನೀಡಲಾಗಿದೆ. ಬ್ಯಾಂಕಿಂಗ್, ಅಂಚೆ, ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಸಾರಿಗೆ ಸೇರಿದಂತೆ ವಿವಿಧ ಸರ್ಕಾರಿ ವಿಭಾಗಗಳ 25 ಕೋಟಿಗೂ ಹೆಚ್ಚು ಉದ್ಯೋಗಿಗಳು ಈ ಮುಷ್ಕರದಲ್ಲಿ ಭಾಗಿಯಾಗುತ್ತಿದ್ದಾರೆ. ಕಾರ್ಮಿಕ ಸಂಘಟನೆಗಳ ಒಕ್ಕೂಟ ಈ ಬಂದ್ ಗೆ ಕರೆ ನೀಡಿದ್ದು, ಜನಸೇವೆಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.

ಬಂದ್ ಯಾಕೆ?
ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ. ಹೊಸ ಕಾರ್ಮಿಕ ಸಂಹಿತೆ (Labour Codes) ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಡಿಮೆ ಮಾಡುವ, ಪ್ರತಿಭಟನೆಗಳ ಮೇಲೆ ನಿಯಂತ್ರಣ ಹೇರುವ, ನಿರುದ್ಯೋಗ ಮತ್ತು ಬೆಲೆ ಏರಿಕೆ ನಿಯಂತ್ರಣದತ್ತ ಗಂಭೀರತೆ ತೋರದ ಹಿನ್ನಲೆಯಲ್ಲಿ ಈ ಬಂದ್ ಆಯೋಜಿಸಲಾಗಿದೆ.

ಬಂದ್‌ನಲ್ಲಿ ಇರುವ ಪ್ರಮುಖ ಬೇಡಿಕೆಗಳು:

  • ಹೊಸ ಲೇಬರ್ ಕೋಡ್‌ಗಳನ್ನು ಹಿಂಪಡೆಯಬೇಕು
  • ಉದ್ಯೋಗಾವಕಾಶ ಹೆಚ್ಚಿಸಬೇಕು, ನಿವೃತ್ತರ ನೇಮಕಾತಿ ನಿಲ್ಲಿಸಬೇಕು
  • ಆರೋಗ್ಯ-ಶಿಕ್ಷಣ-ನಾಗರಿಕ ಸೌಲ್ಯಗಳಿಗೆ ಕಡಿತ ಬೇಡ.
  • ಕಾರ್ಮಿಕ ಸಮ್ಮೇಳನವನ್ನು ಆಯೋಜಿಸಬೇಕು.
  • ರೈತ ಹಾಗೂ ವಲಸೆ ಕಾರ್ಮಿಕರ ಹಕ್ಕುಗಳಿಗೆ ರಕ್ಷಣೆ ನೀಡಬೇಕು.

ಬಂದ್‌ನಿಂದ ಏನು ಮುಚ್ಚಿರುತ್ತೆ?

  • ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಪಿಎಸ್‌ಯುಗಳ ಕಾರ್ಯಗಳು ಸ್ಥಗಿತವಾಗುವ ಸಾಧ್ಯತೆ.
  • ರಾಜ್ಯ ಸಾರಿಗೆ ಸೇವೆಗಳು ಅಸ್ತವ್ಯಸ್ತ ಆಗುವ ಸಾಧ್ಯತೆ.

•ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗಳು.

ಏನು ತೆರೆದಿರುತ್ತೆ?

•ಖಾಸಗಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ.

  • ರೈಲು ಸಂಚಾರ ಸ್ಥಗಿತವಾಗದಿದ್ದರೂ ವಿಳಂಬ ಸಂಭವ

ಜನರಿಗೆ ಸಲಹೆ:
ಭಾರತ್ ಬಂದ್ ಹಿನ್ನೆಲೆಯಲ್ಲಿ ಜನರು ತುರ್ತು ಕೆಲಸಗಳಿಗೆ ಹೊರಟು ಬರುವ ಮೊದಲು ಪರಿಸ್ಥಿತಿ ಪರಿಶೀಲಿಸಿಕೊಳ್ಳುವುದು ಉತ್ತಮ. ಸಾರ್ವಜನಿಕ ಸಾರಿಗೆ ವ್ಯವಹಾರ, ಬ್ಯಾಂಕಿಂಗ್ ಕಾರ್ಯಗಳಲ್ಲಿ ವ್ಯತ್ಯಯ ಎದುರಾಗಬಹುದು.

ರಾಷ್ಟ್ರೀಯ