ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ

ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ , ಗೋಕರ್ಣದ ಶ್ರೀರಾಮಚಂದ್ರಾಪುರ ಮಠದಲ್ಲಿ ಸ್ವಭಾಷಾ ಚಾತುರ್ಮಾಸ್ಯ 2025 ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ ನಡೆಯುತ್ತಿದೆ. ಈ ಪವಿತ್ರ ಚಾತುರ್ಮಾಸ್ಯ ಕಾಲದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯ ಕಾರ್ಯಕ್ರಮಗಳು ಯೋಜಿಸಲಾಗಿದೆ.

ಕಾರ್ಯಕ್ರಮದ ಪ್ರಮುಖ ದಿನಾಂಕಗಳು ಇಂತಿವೆ:
ಶ್ರೀವ್ಯಾಸಪೂಜೆ – ಜುಲೈ 10,
ಶ್ರೀಗುರುಪೌರ್ಣಿಮೆ – ಜುಲೈ 13,
ಸ್ವಭಾಷಾ ಗೋಷ್ಠಿ 1 – ಜುಲೈ 21,
ಶ್ರೀಕೃಷ್ಣಜನ್ಮಾಷ್ಟಮಿ – ಆಗಸ್ಟ್ 16,
ಸ್ವಭಾಷಾ ಗೋಷ್ಠಿ 2 – ಆಗಸ್ಟ್ 19,
ಶ್ರಾವಣ ಶನಿವಾರ ವಿಶೇಷ – ಆಗಸ್ಟ್ 27,
ಸೀಮೋಲ್ಲಂಘನ – ಸೆಪ್ಟೆಂಬರ್ 7.

ಈ ಚಾತುರ್ಮಾಸ್ಯವು ಹಿಂದೂ ಧರ್ಮ, ಭಾಷಾ ಸಂಸ್ಕೃತಿಯ ಗೌರವವನ್ನು ಕಾಪಾಡುವ ಉದ್ದೇಶ ಹೊಂದಿದ್ದು ಎಲ್ಲರಿಗೂ ಮುಕ್ತವಾಗಿ ಆಹ್ವಾನ ನೀಡಲಾಗಿದೆ.

ಆಧ್ಯಾತ್ಮ ಧಾರ್ಮಿಕ