ಕಡಬ: ಇಂದು ಬೆಳಗ್ಗೆ ಪೆರಾಬೆ ಗ್ರಾಮದ ಕದಿರಡ್ಕ ಕ್ರಾಸ್ನಲ್ಲಿ ಕುಂಟ್ಯಾನ-ಪಾಲೆಚ್ಚಾರು ಮತ್ತು ಕದಿರಡ್ಕದ ಯುವಕರು ನೂತನವಾಗಿ ಮರು ನಿರ್ಮಿಸಿದ “ಶಿವಾಜಿ ಜಂಕ್ಷನ್” ಅನ್ನು ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.





ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರು, ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.ಉದ್ಘಾಟನೆಯ ನಂತರ ಭಾಗವಹಿಸಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು..