ಭಾರತ 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯದತ್ತ ತನ್ನ ದೃಷ್ಟಿ ನೆಟ್ಟಿದ್ದು, ಈ ಗುರಿ ಸಾಧನೆಗಾಗಿ ಸಿದ್ಧತೆ ಆರಂಭಿಸಿದೆ. ಅಹಮದಾಬಾದ್ ನಗರವನ್ನು ಭವಿಷ್ಯದ ಒಲಿಂಪಿಕ್ಸ್‌ಗೆ ಆತಿಥೇಯ ನಗರವನ್ನಾಗಿ ನಿರ್ದಿಷ್ಟಪಡಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷೆ ಪಿ.ಟಿ. ಉಷಾ ಅವರು ಲೊಸಾನ್‌ನಲ್ಲಿ ಐಒಸಿ (IOC) ಅಧಿಕಾರಿಗಳನ್ನು ಭೇಟಿಯಾಗಿ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿದರು. ಭಾರತದಲ್ಲಿ ಒಲಿಂಪಿಕ್ಸ್ ಆಯೋಜನೆಯ ಕನಸು ಈ ಮೂಲಕ ಸಾಕಾರವಾಗುವ ಸಾಧ್ಯತೆ ಹೆಚ್ಚಾಗಿದೆ.

