ಕನಕಮಜಲಿನ ಸ್ವರ್ಣ ಮಹಿಳಾ ಮಂಡಳ (ರಿ.) ಮತ್ತು ಶ್ರೀಹರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಕನಕಮಜಲು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 08-07-2025ರ ಮಂಗಳವಾರ ಬೆಳಿಗ್ಗೆ 9:30 ಗಂಟೆಗೆ, ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸಭಾಭವನದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.


ಕಾರ್ಯಕ್ರಮದ ಅಧ್ಯಕ್ಷೆಯಾಗಿ ಶ್ರೀಮತಿ ವಾರಿಜ ಕೋಡ್ತಿಲು, ಅಧ್ಯಕ್ಷರು – ಸ್ವರ್ಣ ಮಹಿಳಾ ಮಂಡಳ (ರಿ.) ,ಕಾರ್ಯಕ್ರಮವನ್ನು ಶ್ರೀಮತಿ ಶಾರದಾ ಉಗ್ಗಮೂಲೆ, ಅಧ್ಯಕ್ಷರು – ಗ್ರಾಮ ಪಂಚಾಯತ್ ಕನಕಮಜಲು ಅವರು ಉದ್ಘಾಟನೆ ಮಾಡಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಪ್ರಮುಖ ಅತಿಥಿಗಳಾಗಿ
🔹 ಶ್ರೀಮತಿ ಶ್ವೇತಾ, ವ್ಯವಸ್ಥಾಪಕರು – ಸಂಜೀವಿನಿ ಒಕ್ಕೂಟ (ರಿ.) ಸುಳ್ಯ
🔹 ಶ್ರೀಯುತ ಮಹೇಶ್, ವಲಯ ಮೇಲ್ವಿಚಾರಕರು – ಸಂಜೀವಿನಿ ಒಕ್ಕೂಟ (ರಿ.) ಸುಳ್ಯ
🔹 ಶ್ರೀಮತಿ ವಿಜಯ, ಅಧ್ಯಕ್ಷರು – ಶ್ರೀಹರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಕನಕಮಜಲು
ಅವರು ಉಪಸ್ಥಿತರಿರಲಿದ್ದಾರೆ.
ಕಾರ್ಯಾಗಾರದಲ್ಲಿ ರೈತರ ಜಾಗೃತಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ.
📌 ತಾಳೆ ಕೃಷಿ ಕುರಿತು ಶ್ರೀ ರವಿಶಂಕರ್, ಕ್ಲಸ್ಟರ್ ಆಫೀಸರ್ – ಸುಳ್ಯ ತಾಲೂಕು, 3F ಆಯಿಲ್ ಪಾಮ್ ಪ್ರೈ. ಲಿಮಿಟೆಡ್ ಸಂಸ್ಥೆಯಿಂದ ಮಾಹಿತಿ ನೀಡಲಿದ್ದಾರೆ.
📌 ಕಾಫಿ ಬೆಳೆ ಕುರಿತು ತುಳಸಿ ಮೋಹನ್, ಅಧ್ಯಕ್ಷರು – ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಿರ್ದೇಶಕರು – ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘ ಅವರು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ಸಂಯೋಜಕರು:
🔹 ಶ್ರೀಮತಿ ಸುಮತಿ ಕುತ್ಯಾಳ
🔹 ಶ್ರೀಮತಿ ಪ್ರೇಮಾ ಅಡ್ಡಾರು