ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂಬ ಕಾರಣದಿಂದ ಸಿಟ್ಟುಗೊಂಡ ಇರಾನ್, ಇದೀಗ ಅಮೆರಿಕದ ವಿರುದ್ಧ ಬೃಹತ್ ಪ್ರತೀಕಾರ ಕೈಗೊಂಡಿದೆ. ಇರಾನ್ ಸೇನೆ, ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಹತ್ವದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.


ದೋಹಾದಲ್ಲಿ ಭಾರೀ ಸ್ಫೋಟದ ಶಬ್ದಗಳು
ಕತಾರ್‌ನ ರಾಜಧಾನಿಯಾದ ದೋಹಾದಲ್ಲಿಯೂ ಸ್ಫೋಟದ ಭಾರೀ ಶಬ್ದಗಳು ಕೇಳಿಬಂದಿದ್ದು, ಹಲವು ಭಾಗಗಳಲ್ಲಿ ಸ್ಫೋಟ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಅಲ್ಲಿನ ಜನಜೀವನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಲ್ ಉದೈದ್ ವಾಯುನೆಲೆಗೆ ಬೆದರಿಕೆ
ಕತಾರ್‌ನ ಅಲ್ ಉದೈದ್ ಎಂಬ ವಿಶ್ವದ ಪ್ರಮುಖ ಅಮೆರಿಕ ಸೇನಾ ನೆಲೆ ಇದಾಗಿದೆ. ಸುಮಾರು 10,000ಕ್ಕೂ ಅಧಿಕ ಸೈನಿಕರು ಕಾರ್ಯನಿರ್ವಹಿಸುತ್ತಿರುವ ಈ ನೆಲೆ, ಅಮೆರಿಕದ ಕೇಂದ್ರ ಕಮಾಂಡ್‌ನ ಪ್ರಮುಖ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ನೆಲೆ ಇರಾನ್‌ನ ಹದ್ದಿನಲ್ಲಿ ಬಿದ್ದಿದೆ ಎಂದು ಪಾಶ್ಚಿಮಾತ್ಯ ರಾಜತಾಂತ್ರಿಕರು ತಿಳಿಸಿದ್ದಾರೆ.
ಪೆಂಟಗನ್ ತುರ್ತು ಕ್ರಮ
ಇದಕ್ಕೂ ಮುನ್ನ, ಇರಾನ್‌ನಿಂದ ಸಾಧ್ಯವಿರುವ ದಾಳಿಗಳ ಕುರಿತು ಗುಪ್ತಚರ ಮಾಹಿತಿಗಳನ್ನು ಪಡೆದ ಪೆಂಟಗನ್, ಎಚ್ಚರಿಕೆಯ ಕ್ರಮವಾಗಿ ಅಲ್ ಉದೈದ್ ವಾಯುನೆಲೆಯಿಂದ ಅಮೆರಿಕ ವಿಮಾನಗಳನ್ನು ತಕ್ಷಣವೇ ಸ್ಥಳಾಂತರ ಮಾಡಿರುವುದಾಗಿ ವರದಿಯಾಗಿದೆ.
ಯುದ್ಧ ವಿಸ್ತರಣೆ ಆತಂಕ
ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕ್ಷಿಪಣಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇಸ್ರೇಲ್-ಇರಾನ್ ನಡುವಿನ ಯುದ್ಧದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗುತ್ತಿರುವುದು ಖಚಿತವಾಗುತ್ತಿದೆ. ಇದರ ಪರಿಣಾಮವಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧ ವಿಸ್ತಾರಗೊಳ್ಳುವ ಆತಂಕವೂ ಹೆಚ್ಚಾಗಿದೆ.