ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರ ಶತಕಗಳಿಂದ ಟೀಮ್ ಇಂಡಿಯಾ ಬೃಹತ್ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಾಟದಲ್ಲಿ ಈ ಜೋಡಿ ಇಂಗ್ಲಿಷ್ ಬೌಲರ್‌ಗಳ ಆತ್ಮವಿಶ್ವಾಸವನ್ನು ಕಿತ್ತುಕೊಂಡಿದೆ.


ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಎರಡನೇ ಇನ್ನಿಂಗ್ಸ್ ಕೊನೆಯಲ್ಲಿ ಪಂತ್ ಮತ್ತು ರಾಹುಲ್ ನಡುವಿನ 195 ರನ್‌ಗಳ ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ 364 ರನ್ ಗಳಿಸಿ, 370 ರನ್ ಗಳ ಮುನ್ನಡೆ ಪಡೆದಿದೆ.
ಕೆಎಲ್ ರಾಹುಲ್ ತಮ್ಮ 9ನೇ ಟೆಸ್ಟ್ ಶತಕವನ್ನು 202 ಎಸೆತಗಳಲ್ಲಿ ಪೂರೈಸಿದರು. ಇದು ಏಷ್ಯಾದಿಂದ ಹೊರಗೆ ಅವರ 6ನೇ ಶತಕವಾಗಿದ್ದು, ಸುನೀಲ್ ಗವಾಸ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಓಪನರ್.



ಇನ್ನು ರಿಷಭ್ ಪಂತ್ ಇಂಗ್ಲೆಂಡ್‌ನಲ್ಲಿ ನಾಲ್ಕನೇ ಟೆಸ್ಟ್ ಶತಕ ಬಾರಿಸಿದ ಮೊದಲ ವಿದೇಶಿ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದರು. ಪಂತ್ ತಮ್ಮ ಹಾಫ್ ಸೆಂಚುರಿ ನಂತರ ಕೇವಲ 25 ಎಸೆತಗಳಲ್ಲಿ 44 ರನ್ ಕಲೆಹಾಕಿದರು. 100 ಪೂರೈಸಲು ಇನ್ನೂ 22 ಎಸೆತ ತೆಗೆದುಕೊಂಡರೂ, ಬಳಿಕ ಜೋ ರೂಟ್ ಬೌಲಿಂಗ್‌ನಲ್ಲಿ 4, 6, 4 ಬಾರಿಸಿ ಸ್ಪೋಟಕ ಆಟವಾಡಿದರು.
ಇನ್ನೂ ಒಂದು ಸೆಷನ್, ಒಂದು ದಿನ ಬಾಕಿಯಿರುವ ಈ ಪಂದ್ಯದಲ್ಲಿ ಭಾರತ ಗೆಲುವಿನತ್ತ ಸ್ಪಷ್ಟ ಹೆಜ್ಜೆ ಇಟ್ಟಿದೆ.