ಯುಎಸ್ ದಾಳಿಯ ನಂತರದ ಪರಿಸ್ಥಿತಿಯ ಕುರಿತು ಮೋದಿ ಮತ್ತು ಪೆಜೆಷ್ಕಿಯನ್ ನಡುವಿನ 45 ನಿಮಿಷಗಳ ದೂರವಾಣಿ ಸಂಭಾಷಣೆ

ಯುಎಸ್ ದಾಳಿಯ ನಂತರದ ಪರಿಸ್ಥಿತಿಯ ಕುರಿತು ಮೋದಿ ಮತ್ತು ಪೆಜೆಷ್ಕಿಯನ್ ನಡುವಿನ 45 ನಿಮಿಷಗಳ ದೂರವಾಣಿ ಸಂಭಾಷಣೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಅವರು ಭಾನುವಾರ 45 ನಿಮಿಷಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದರು.

ಈ ಸಂಭಾಷನೆಯು ಅಮೆರಿಕ ತನ್ನ “ಪ್ರಿಸಿಷನ್ ಸ್ಟ್ರೈಕ್” ಕಾರ್ಯಾಚರಣೆಯ ಭಾಗವಾಗಿ ಇರಾನ್‌ನ ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿ ನಡೆಸಿದ ಬಳಿಕ ನಡೆದಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಇರಾನ್ ಅಧ್ಯಕ್ಷ ಪೆಜೆಷ್ಕಿಯನ್ ಅವರು ಪ್ರಧಾನಮಂತ್ರಿ ಮೋದಿಗೆ ಫೋನ್ ಮೂಲಕ ಕರೆ ನೀಡಿ, ಅಮೆರಿಕದ ದಾಳಿಯಿಂದ ಉಂಟಾದ ಪರಿಸ್ಥಿತಿಯನ್ನು ವಿವರಿಸಿದರು. ಅವರು ಭಾರತವನ್ನು ಪ್ರಮುಖ ಶಾಂತಿ ಸ್ನೇಹಿ ರಾಷ್ಟ್ರವೆಂದು ಬಣ್ಣಿಸಿ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಶಾಂತಿ ಸ್ಥಾಪನೆಗೆ ಬಳಸಲಿ ಎಂದು ವಿನಂತಿಸಿದರು.

Uncategorized