ಅಮೆರಿಕದಿಂದ ಇರಾನ್ ಮೇಲೆ ದಾಳಿ : ಇರಾನ್‌ನ ಮೂರು ನ್ಯೂಕ್ಲಿಯರ್ ತಾಣಗಳನ್ನು ಗುರಿಯಾಗಿಸಿ ದಾಳಿ

ಅಮೆರಿಕದಿಂದ ಇರಾನ್ ಮೇಲೆ ದಾಳಿ : ಇರಾನ್‌ನ ಮೂರು ನ್ಯೂಕ್ಲಿಯರ್ ತಾಣಗಳನ್ನು ಗುರಿಯಾಗಿಸಿ ದಾಳಿ

ಅಮೆರಿಕವು ಭಾನುವಾರದ ಮುಂಜಾವೆ ಇರಾನ್ ವಿರುದ್ಧ ಭಾರೀ ಏರ್‌ಸ್ಟ್ರೈಕ್ ನಡೆಸಿದ್ದು, ದೇಶದ ಮೂರು ಪ್ರಮುಖ ಅಣುಶಕ್ತಿ ತಾಣಗಳಾದ ಫೋರ್ಡೋ, ನಾಟಾಂಜ್ ಮತ್ತು ಇಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆದಿದೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಹಿನ್ನಲೆಯಲ್ಲಿ ಈ ದಾಳಿ ನಡೆದಿದ್ದು, ಈ ಮೂಲಕ ಅಮೆರಿಕ ಪ್ರತ್ಯಕ್ಷವಾಗಿ ಸಂಘರ್ಷಕ್ಕೆ ಕಾಲಿಟ್ಟಿದೆ.

ಭೂಗರ್ಭದಲ್ಲಿ ಅತಿದೊಡ್ಡ ಭದ್ರತೆಯೊಂದಿಗೆ ನಿರ್ಮಿಸಲಾದ ಫೋರ್ಡೋ ತಾಣದ ಮೇಲೆ ಅಮೆರಿಕ ತನ್ನ ಅತ್ಯಾಧುನಿಕ B-2 ಸ್ಟೆಲ್ತ್ ಬಾಂಬರ್ ಮೂಲಕ 30,000 ಪೌಂಡ್ ತೂಕದ 6 ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿದ್ದು, ಇದರಿಂದ ಭಾರಿ ನಾಶ ಸಂಭವಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಕುರಿತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು:
“ಇದು ಇತಿಹಾಸ ನಿರ್ಮಿಸಿರುವ ಕ್ಷಣ. ದಾಳಿ ಸಂಪೂರ್ಣ ಯಶಸ್ವಿಯಾಗಿದೆ. ನಮ್ಮ ಎಲ್ಲಾ ಯೋಧರು ಸುರಕ್ಷಿತವಾಗಿದ್ದಾರೆ. ಈಗ ಶಾಂತಿಗಾಗಿ ಸಮಯ ಬಂದಿದೆ.” ಎಂದು ಟ್ವೀಟ್ ಮೂಲಕ ಘೋಷಿಸಿದರು.

ಇನ್ನು ವೈಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಟ್ರಂಪ್, ” ಇನ್ನೂ ಅನೇಕ ಗುರಿಗಳು ಬಾಕಿ ಇವೆ. ಶೀಘ್ರದಲ್ಲಿ ಶಾಂತಿ ಸ್ಥಾಪಿಸದಿದ್ದರೆ ಇನ್ನುಳಿದ ಗುರಿಗಳನ್ನು ಹೊಡೆದುರುಳಿಸುತ್ತೇವೆ ” ಎಂದು ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.

ಈ ದಾಳಿ ನಡುವೆ ಜಾಗತಿಕ ನಾಯಕರು ತೀವ್ರ ಗಮನ ಹರಿಸಿದ್ದು, ಮಧ್ಯಪೂರ್ವದಲ್ಲಿ ಉದ್ವಿಗ್ನತೆಯ ಮಟ್ಟ ಮತ್ತಷ್ಟು ಏರಲಿದೆ ಎಂಬ ಅಂದಾಜುಗಳು ವ್ಯಕ್ತವಾಗಿವೆ. ಈ ದಾಳಿಗೆ ಇರಾನ್ ಹೇಗೆ ಪ್ರತಿಸ್ಪಂದಿಸುತ್ತದೆ ಎಂಬುದನ್ನು ನೋಡಬೇಕಿದೆ.

Uncategorized