ಇಂದು ನಡೆದ ವಿದ್ಯಮಾನದಲ್ಲಿ ನ್ಯೂಸ್ ರೂಮ್ ಫಸ್ಟ್ ಚಾನಲ್ ನ ಹೆಸರನ್ನು ದುರ್ಬಳಕೆ ಮಾಡಿದ ವೆಬ್ ನ್ಯೂಸ್ ಚಾನೆಲ್ ನ ಮಾಲಕ ಮತ್ತು ಸಂಪಾದಕನ ಮೇಲೆ ನ್ಯೂಸ್ ರೂಮ್ ಪಸ್ಟ್ ನ್ಯಾಷನಲ್ ಸೈಬರ್ ಕ್ರೈಂ ವಿಭಾಗದಲ್ಲಿ ಅಧಿಕೃತವಾಗಿ ದೂರು ದಾಖಲಿಸಿದೆ. ನ್ಯೂಸ್ ರೂಮ್ ಫಸ್ಟ್ ಈ ಮೊದಲೇ ವಿಡಿಯೋ ಡಿಲೀಟ್ ಮಾಡಲು ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳದ ಈ ದುರಂಕಾರಿ ಸಂಪಾದಕ ತನ್ನ ಉದ್ಧಟತನ ತೋರಿರುವುದಕ್ಕೆ ತಕ್ಕ ಬೆಲೆ ತೆರುವ ಸಂದರ್ಭ ಎದುರಾಗಲಿದೆ.


ಈಗಾಗಲೇ ದಾಖಲಾದ ಈ ದೂರು ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (Information Technology Act, 2000)
ಸೆಕ್ಷನ್ 66C – (Identity Theft)
ಇತರರ ಹೆಸರು, ಲೋಗೋ, ವಾಟರ್‌ಮಾರ್ಕ್ ಅಥವಾ ಡಿಜಿಟಲ್ ಗುರುತನ್ನು ಅನಧಿಕೃತವಾಗಿ ಬಳಸುವುದು
👉 ಅದಕ್ಕೆ 3 ವರ್ಷಗಳವರೆಗೆ ಜೈಲು ಮತ್ತು/ಅಥವಾ ₹1 ಲಕ್ಷದವರೆಗೆ ದಂಡ ವಿಧಿಸಬಹುದು.
ಸೆಕ್ಷನ್ 66D – ಕಂಪ್ಯೂಟರ್ ಮೂಲಕ ವ್ಯಕ್ತಿ ಅನುಕರಣ (Impersonation using Computer Resource)
ಯೂಟ್ಯೂಬ್ ಅಥವಾ ವೆಬ್ ಮೂಲಕ ನಕಲಿ ಗುರುತು ಸೃಷ್ಟಿಸುವುದು
👉 3 ವರ್ಷಗಳವರೆಗೆ ಸಜಾಯಿಗೆ ಒಳಪಡುವುದು ಮತ್ತು ₹1 ಲಕ್ಷದವರೆಗೆ ದಂಡವಿದೆ.
ಈ ಪ್ರಕರಣದಲ್ಲಿ ಸಂಬಂಧಿಸಿದ ವ್ಯಕ್ತಿ ಕಾನೂನು ಕಾರ್ಯಾಚರಣೆ ಎದುರಿಸಬೇಕಾಗಿದ್ದು, ಡಿಜಿಟಲ್ ಜಗತ್ತಿನಲ್ಲಿ ದುರೂದ್ಯೇಶಪೂರ್ವಕ ನಕಲಿಗೆ ಕಾನೂನು ತನ್ನ ಕೆಲಸ ಮಾಡಲಿದೆ.