ಇರಾನ್ ಇಸ್ರೇಲ್ನ ಇಂಟಲಿಜೆನ್ಸ್ ಕೇಂದ್ರಕ್ಕೆ ಬಾಂಬ್ ದಾಳಿ ನಡೆಸುತ್ತಿದ್ದು, ಈ ದಾಳಿ ಯಶಸ್ವಿಯಾಗಿತ್ತು ಎಂದು ಘೋಷಿಸಿದೆ. ಇಸ್ರೇಲ್ ಟೆಹ್ರಾನ್ನ ಪ್ರಮುಖ ಅಣು ತಾಣಗಳನ್ನು ಧ್ವಂಸಗೊಳಿಸಿದ್ದಕ್ಕೆ ಪ್ರತಿದಾಳಿಯಾಗಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಆದರೆ ಈ ಕುರಿತು ಇಸ್ರೇಲ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.


ಟೆಹ್ರಾನ್ನಲ್ಲಿ ಇರಾನ್ನ ಅಣು ಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯ ನಂತರದಿಂದ ಎರಡೂ ದೇಶಗಳು ಪರಸ್ಪರವಾಗಿ ನಿರಂತರ ದಾಳಿಗಳನ್ನು ನಡೆಸುತ್ತಿದೆ.