ಅಹಮದಾಬಾದ್: ಏರ್ ಇಂಡಿಯಾ ಮತ್ತೆ ತಾಂತ್ರಿಕ ದೋಷದ ಸಮಸ್ಯೆಗೆ ತುತ್ತಾಗಿದೆ. ಅಹಮದಾಬಾದ್ನಿಂದ ಲಂಡನ್ಗೆ ತೆರಳಬೇಕಿದ್ದ AI 159 ನಂಬರ್ ಹೊಂದಿದ ವಿಮಾನ, ತಾಂತ್ರಿಕ ದೋಷದ ಕಾರಣದಿಂದ ಮಂಗಳವಾರ ರದ್ದುಪಡಿಸಲಾಗಿದೆ. ನವದೆಹಲಿಯಿಂದ ಅಹಮದಾಬಾದ್ಗೆ ಆಗಮಿಸಿದ್ದ ಈ ವಿಮಾನವು ಲಂಡನ್ಗೆ ಹೊರಡಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣದಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಲಾಯಿತು.


ಇದೀಗ ಇದೇ ಮಾರ್ಗದಲ್ಲಿ ಎರಡನೇ ಬಾರಿಗೆ ವಿಮಾನ ಸೇವೆ ಸ್ಥಗಿತವಾಗಿದ್ದು, ಮುನ್ನೆ ದಿನವೂ (ಸೋಮವಾರ) ತಾಂತ್ರಿಕ ದೋಷದಿಂದ ಒಂದು ಹಾರಾಟವನ್ನು ರದ್ದುಪಡಿಸಲಾಗಿತ್ತು. ಇತ್ತೀಚೆಗೆ ಇದೇ ಮಾರ್ಗದಲ್ಲಿ ನಡೆದಿರುವ ವಿಮಾನ ಅಪಘಾತದ ಹಿನ್ನಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕವೂ ಹೆಚ್ಚಾಗಿದೆ.