ಇಸ್ರೇಲ್–ಇರಾನ್ ನಡುವಿನ ಭೀಕರ ಯುದ್ಧ: ತೆಹ್ರಾನ್ ಮೇಲೆ ಇಸ್ರೇಲ್ ದಾಳಿ, ಎರಡೂ ದೇಶಗಳಲ್ಲಿ ಆತಂಕದ ವಾತಾವರಣ

ಇಸ್ರೇಲ್–ಇರಾನ್ ನಡುವಿನ ಭೀಕರ ಯುದ್ಧ: ತೆಹ್ರಾನ್ ಮೇಲೆ ಇಸ್ರೇಲ್ ದಾಳಿ, ಎರಡೂ ದೇಶಗಳಲ್ಲಿ ಆತಂಕದ ವಾತಾವರಣ

ತೆಹ್ರಾನ್/ತಲ್‌ಅವೀವ್: ಇಸ್ರೇಲ್‌ನ ವಾಯುಸೇನೆ ಭಾನುವಾರ ಇರಾನ್ ನ ತೆಹ್ರಾನ್‌ನ ಮೇಲೆ ಭಾರೀ ಬಾಂಬ್ ದಾಳಿ ನಡೆಸಿದ ಪರಿಣಾಮ, ಇಂಧನ ಭಂಡಾರಗಳು ಹೊತ್ತಿ ಉರಿದ ದೃಶ್ಯಗಳು ಜನಮನದಲ್ಲಿ ತೀವ್ರ ಭೀತಿಯನ್ನು ಉಂಟುಮಾಡಿವೆ.

ಇಸ್ರೇಲ್ ದಾಳಿಗೆ ಇರಾನ್‌ನ ರಕ್ಷಣಾ ಸಚಿವಾಲಯ, ಶಾಹ್ರಾನ್‌ನ ಮುಖ್ಯ ಇಂಧನ ಗೋದಾಮು ಮತ್ತು ಪರಮಾಣು ಯೋಜನೆಗೆ ಸಂಬಂಧಿಸಿದ ಪ್ರಮುಖ ಸೌಕರ್ಯಗಳು ಹಾನಿಯಾಗಿದೆ. ಈ ದಾಳಿಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಆರು ಮಂದಿ ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳಿದ್ದಾರೆ ಎಂದು ವರದಿಯಾಗಿದೆ. ಈ ಮಾಹಿತಿ ಇರಾನ್‌ನ ಇಂಧನ ಇಲಾಖೆ ಅಧಿಕೃತವಾಗಿ ದೃಢಪಡಿಸಿದೆ.

ಇರಾನ್ ಪ್ರತಿದಾಳಿಯಾಗಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ 200ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ ಕಡೆಗೆ ಉಡಾಯಿಸಿದ್ದು, ಇಸ್ರೇಲ್‌ನಲ್ಲಿ ಕನಿಷ್ಠ 8 ಮಂದಿ (ಹೆಣ್ಣುಮಕ್ಕಳು ಮತ್ತು ಮಕ್ಕಳು ಸೇರಿ) ಸಾವಿಗೀಡಾಗಿದ್ದಾರೆ.ಇಸ್ರೇಲ್ ಸೇನೆಯ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಸುಮಾರು 150 ಗುರಿ ದಾಳಿಗಳನ್ನು ಇರಾನ್ ವಿರುದ್ಧ ನಡೆಸಲಾಗಿದೆ. ಶನಿವಾರದ ದಾಳಿಯಲ್ಲಿ ಇಸ್ರೇಲ್ ತೆಹ್ರಾನ್‌ನ ಪ್ರಮುಖ ವಾಯು ಭದ್ರತಾ ಘಟಕಗಳನ್ನು ನಾಶಪಡಿಸಿದೆ. ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಎಫ್ಫಿ ಡೆಫ್ರಿನ್, “ತೆಹ್ರಾನ್ ಆಕಾಶದಲ್ಲಿ ಈಗ ನಾವು ಮುಕ್ತವಾಗಿ ಕಾರ್ಯಚರಣೆ ನಡೆಸುತ್ತಿರುವ ಸ್ಥಿತಿಯಲ್ಲಿದ್ದೇವೆ,” ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ