‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಸುತ್ತುವರಿದಿರುವ ದುರ್ಘಟನೆಗಳು ಇನ್ನೂ ನಿಲ್ಲುತ್ತಿಲ್ಲ. ಚಿತ್ರ ತಂಡಕ್ಕೆ ಮತ್ತೆ ಒಂದು ಆಘಾತದ ಸುದ್ದಿ ದೊರಕಿದ್ದು, ಮತ್ತೋರ್ವ ಜೂನಿಯರ್ ಆರ್ಟಿಸ್ಟ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಕೆಲವೇ ತಿಂಗಳಲ್ಲೇ ಮೂವರು ಕಲಾವಿದರು ನಿಧನರಾಗಿದ್ದಾರೆ.


ಮೃತ ವ್ಯಕ್ತಿಯನ್ನು ವಿಜು ವಿಕೆ ಎಂದು ಗುರುತಿಸಲಾಗಿದೆ. ಅವರು ಕೇರಳದ ತ್ರಿಶೂರ್ ಮೂಲದವರಾಗಿದ್ದು, ಚಿತ್ರೀಕರಣದ ನಿಮಿತ್ತ ಆಗುಂಬೆಗೆ ಬಂದಿದ್ದರು. ಜೂನ್ 11ರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ತುರ್ತು ಚಿಕಿತ್ಸೆಗಾಗಿ ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾರೆ.
ಈ ಹಿಂದೆ ಇದೇ ಚಿತ್ರದಲ್ಲಿ ಕಪಿಲ್ ಮತ್ತು ರಾಕೇಶ್ ಪೂಜಾರಿ ಎಂಬ ಕಲಾವಿದರು ಸಹ ಹೃದಯಾಘಾತದಿಂದ ಮೃತಪಟ್ಟಿದ್ದರು