ಇನ್ನೂ ವಾಟ್ಸಾಪ್ ಗೆ ಹೇಳಿ ಗುಡ್‌ಬೈ! ಬಂದಿದೆ ನೂತನ XChat

ಇನ್ನೂ ವಾಟ್ಸಾಪ್ ಗೆ ಹೇಳಿ ಗುಡ್‌ಬೈ! ಬಂದಿದೆ ನೂತನ XChat

ಬೆಂಗಳೂರು, ಜೂನ್ 10:ಟೆಕ್ ಜಗತ್ತಿನಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಎಲೋನ್ ಮಸ್ಕ್, ತಮ್ಮ ಕಂಪನಿ X (ಹಳೆಯದಾಗಿ Twitter) ಮೂಲಕ ನೂತನ ಖಾಸಗಿ ಮೆಸೇಜಿಂಗ್ ಫೀಚರ್ XChat ಅನ್ನು ಘೋಷಿಸಿದ್ದಾರೆ.

ಇದು ವಾಟ್ಸಾಪ್, ಟೆಲಿಗ್ರಾಂ ಮುಂತಾದ ಜನಪ್ರಿಯ ಸಂದೇಶೋಪಕರಣಗಳಿಗೆ ಕಠಿಣ ಪೈಪೋಟಿ ನೀಡಲು ಬರುತ್ತಿದ್ದು, ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್, ಕಾಣೆಯಾಗುವ ಮೆಸೇಜುಗಳು, ಕ್ರಾಸ್‌ಪ್ಲಾಟ್‌ಫಾರ್ಮ್ ಆಡಿಯೋ/ವೀಡಿಯೋ ಕಾಲಿಂಗ್ ಮುಂತಾದ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಎಲೋನ್ ಮಸ್ಕ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ X ಅನ್ನು ಸರ್ವಾಂಗೀಣ ಆಪ್ ಆಗಿ ರೂಪಿಸುವ ಕಾರ್ಯದಲ್ಲಿಯೇ ಈ XChat ಬಿಡುಗಡೆ ಆಗಿದ್ದು, ಸಾಮಾಜಿಕ ಮಾಧ್ಯಮ, ಸಂದೇಶ ವಿನಿಮಯ, ಹಣ ವ್ಯವಹಾರ ಸೇರಿದಂತೆ ಹಲವು ಸೇವೆಗಳನ್ನು ಒಂದೇ ಆಪ್‌ನಲ್ಲಿ ನೀಡುವ ಗುರಿಯಾಗಿದೆ.”ಇದು ಭವಿಷ್ಯದ ಸಂಪರ್ಕ ಸಾಧನೆಗೆ ದಾರಿ ತೋರಿಸಲಿದೆ.

ನಿಮಗೆ ವಾಟ್ಸಾಪ್ ಬೇಕಾಗಿಲ್ಲ, XChat ಸಾಕು!” ಎಂದು ಮಸ್ಕ್ ಅವರು ಘೋಷಿಸಿದ್ದಾರೆ.ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ #GoodbyeWhatsApp, #XChatTrends ಮೊದಲಾದ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ

ತಂತ್ರಜ್ಞಾನ