ಕೃಣಾಲ್ ಕಮಾಲ್ — ಕೊನೆಗೂ RCB ಐಪಿಎಲ್ ಚಾಂಪಿಯನ್!

ಕೃಣಾಲ್ ಕಮಾಲ್ — ಕೊನೆಗೂ RCB ಐಪಿಎಲ್ ಚಾಂಪಿಯನ್!

ಐಪಿಎಲ್ ನ 18 ನೇ ಆವೃತ್ತಿ, 17 ವರ್ಷಗಳ ಕಾಯುವಿಕೆ, ಜರ್ಸಿ ನಂಬರ್ 18, ಕೋಟಿ ಕೋಟಿ ಅಭಿಮಾನಿಗಳ ಕನಸು ಕೊನೆಗೂ ಈಡೇರಿದೆ.
ರಜತ್ ಪಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೊನೆಗೂ ಕಪ್ ಗೆದ್ದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಆರು ರನ್‌ಗಳ ರೋಚಕ ಜಯದೊಂದಿಗೆ RCB ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ಮ್ಯಾಚ್ ಹೀರೋ: ಕೃಣಾಲ್ ಪಾಂಡ್ಯಾ
ಆಫ್-ಸ್ಪಿನ್ನರ್ ಕೃಣಾಲ್ ಪಾಂಡ್ಯಾ ತಮ್ಮ ಅದ್ಭುತ 4 ಓವರಿನಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ತೆಗೆದು ಪಂದ್ಯದಲ್ಲಿ ದೊಡ್ಡ ತಿರುವು ತಂದು ಮಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆದರು. ಭುವನೇಶ್ವರ ಕುಮಾರ್ ಕೂಡ 2 ಪ್ರಮುಖ ವಿಕೆಟ್ ಪಡೆದು ತಂಡಕ್ಕೆ ಬೆಂಬಲ ನೀಡಿದರು. ಶಶಾಂಕ್ ಸಿಂಗ್ (60 ರನ್ 31 ಎಸೆತಗಳಲ್ಲಿ) ಅವರ ದಿಟ್ಟ ಪ್ರಯತ್ನ ವ್ಯರ್ಥವಾಯಿತು.

ಈ ಬಾರಿ RCB ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಟೂರ್ನಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಅದರಲ್ಲೂ ಈ ಬಾರಿ RCB ಯ ಬೌಲಿಂಗ್ ವಿಭಾಗ ಕಪ್ ಗೆಲ್ಲುವ ಕನಸು ನನಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.
ವಿರಾಟ್ ಕೊಹ್ಲಿಗೆ ಸಾರ್ಥಕ ಸಮರ್ಪಣೆ
ಐಪಿಎಲ್‌ನ 18ನೇ ಸೀಸನ್, ನಂ.18 ಜರ್ಸಿ ತೊಟ್ಟ ವಿರಾಟ್ ಕೊಹ್ಲಿಗೆ ಕೊನೆಗೂ ಯೋಗ್ಯ ಪ್ರತಿಫಲ ಸಿಕ್ಕಿತು. ಪಂದ್ಯದಲ್ಲಿ ಕೊಹ್ಲಿ 43 ರನ್ (35 ಎಸೆತ) ಗಳಿಸಿ ಪ್ರಮುಖ ಪಾತ್ರವಹಿಸಿದರು. ಅವರಿಗೆ ಈ ಕಪ್ ಒಂದು ವೃತ್ತಿಪರ ಜೀವನದ ಅತ್ಯಂತ ಭಾವನಾತ್ಮಕ ಕ್ಷಣವಾಗಿದ್ದು, ಗೆಲುವು ನಿಶ್ಚಿತವಾಗುತ್ತಿದ್ದಂತೆ ಅವರ ಕಣ್ಣುಗಳು ತೇವವಾದವು.

ಕ್ರೀಡೆ