ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ನಿಗದಿತ 20 ಓವರ್ ನಲ್ಲಿ ಸಾಧಾರಣ ಮೊಟ್ಟವಾದ 190 ಗಳಿಸಿ ಪಂಜಾಬ್ ಗೆ 191 ರನ್ ಗಳ ಗುರಿಯನ್ನು ನೀಡಿತು. ಆರ್ ಸಿ ಬಿ ಪರ ಸಾಲ್ಟ್ 16 ಕೊಹ್ಲಿ 43 ಅಗರ್ವಾಲ್ 24 ನಾಯಕ ರಜತ್ ಪಟಿದಾರ್ 26 ಲಿವಿಂಗ್ಸ್ಟಾನ್ 25 ಮತ್ತು ಜಿತೇಶ್ ಶರ್ಮಾ 24 ಮತ್ತು ಶೇಫಾರ್ಡ್ 17 ರನ್ ಗಳಿಸಿದರು.


191 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಆರ್ ಸಿ ಬಿ ಯ ಬೌಲರುಗಳ ಸಾಂಘಿಕ ಪ್ರಯತ್ನ ದಿಂದ 184 ರನ್ ಗಳಿಸಿ ಸೋಲು ಕಂಡಿತು. ಇದರೊಂದಿಗೆ 18 ವರ್ಷಗಳ ಕಾಯುವಿಕೆಯ ನಂತರ ಆರ್ ಸಿ ಬಿ ಕಪ್ ಗೆದ್ದು ಈ ಸಲ ಕಪ್ ನಮ್ಮದೇ ಎನ್ನುವ ಅಭಿಮಾನಿಗಳ ಕನಸನ್ನು ಈಡೇರಿಸಿತು.