ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್ ಸಿ ಬಿ ಯ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ 14.1 ಓವರ್ ನಲ್ಲಿ 101 ರನ್ ಗಳಿಗೆ ಅಲ್ ಔಟ್ ಆಯಿತು.


ಆರ್ ಸಿ ಬಿ ಪರ ಹೆಜ್ಯುಲ್ ವುಡ್ 3 ಮತ್ತು ಸುಯಶ್ ಶರ್ಮಾ ತಲಾ 3 ವಿಕೆಟ್ ಪಡೆದು ಮಿಂಚಿದರು. 102 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್ ಸಿ ಬಿ ಫಿಲ್ ಸಾಲ್ಟ್ ಅವರ ಆಕರ್ಷಕ ಅರ್ಧ ಶತಕದಿಂದ 10 ಓವರ್ ನಲ್ಲಿ ಗುರಿಯನ್ನು ತಲುಪಿ ಫೈನಲ್ ಗೆ ಲಗ್ಗೆ ಇಟ್ಟಿತು.



ಈ ಮೂಲಕ ಈ ಸಲ ಕಪ್ ನಮ್ಮದೇ ಅನ್ನುವ ಭರವಸೆಯನ್ನು ಅಭಿಮಾನಿಗಳಲ್ಲಿ ಮೂಡಿಸಿದೆ .