ಬೆಂಗಳೂರು: ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಲು ಆರ್ಸಿಬಿ ಅಭಿಮಾನಿಗಳು ವಿಭಿನ್ನ ರೀತಿಯ ತಯಾರಿ ಮಾಡಿದ್ದಾರೆ. ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ, ರಾಜಧಾನಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಆರ್ಸಿಬಿ ಅಭಿಮಾನಿಗಳು ಚಿರಪರಿಚಿತ ರೆಡ್ ಜೆರ್ಸಿಯ ಬದಲು ವೈಟ್ ಜೆರ್ಸಿಯನ್ನು ಧರಿಸಿ ಮೈದಾನಕ್ಕೆ ಹಾಜರಾಗಲಿದ್ದಾರೆ.


ವಿರಾಟ್ ಕೊಹ್ಲಿಗೆ ವಿಶಿಷ್ಟ ಸ್ಥಾನವಿರುವ ನಂ.18 ವೈಟ್ ಜೆರ್ಸಿಯು “ಟ್ರಿಬ್ಯೂಟ್ ಟು ದಿ ಕಿಂಗ್” ಎಂದು ಅಭಿಮಾನಿಗಳಿಂದ ಕರೆಯಲ್ಪಡುತ್ತಿದೆ. ಇದೇ ಮೂಲಕ ಕ್ರಿಕೆಟ್ ಲೋಕದ ಕಿಂಗ್ವಿಗೆ ಅವರಿಗೆ ತಕ್ಕ ಗೌರವ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಸಾಧನೆಗಳು ಬಹಳ ವಿಶಿಷ್ಟವಾಗಿವೆ. ಅವರು ಕ್ರಿಕೆಟ್ನ ಅತ್ಯುತ್ತಮ ಮಟ್ಟದಲ್ಲಿ ಭಾರತಕ್ಕೆ ನಾಯಕತ್ವ ನೀಡಿ ಅನೇಕ ಮಹತ್ವದ ಜಯಗಳನ್ನು ದಾಖಲಿಸಿದ್ದಾರೆ. ಆದರೂ, ಅವರ ಟೆಸ್ಟ್ ವಿದಾಯ ಸಂದರ್ಭದಲ್ಲಿ ಬಿಸಿಸಿಐ ಅಥವಾ ಯಾವುದೇ ಅಧಿಕೃತ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಬೀಳ್ಕೊಡಿಗೆ ಕಾರ್ಯಕ್ರಮ ನಡೆಯಲಿಲ್ಲ. ಈ ಕೊರತೆಯನ್ನು ಪೂರೈಸಲು, ಅವರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ವೈಟ್ ಜೆರ್ಸಿ ಧರಿಸಿ, “ಟ್ರಿಬ್ಯೂಟ್ ಟು ದಿ ಕಿಂಗ್” ಎಂಬ ಅಭಿಯಾನದ ಮೂಲಕ ತಮ್ಮ ಪ್ರೀತಿ ಹಾಗೂ ಗೌರವವನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.