ನವದೆಹಲಿ: ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ ಟರ್ಕಿ ರಾಷ್ಟ್ರಪತಿ ರೆಸೆಪ್ ಟೈಯಿಪ್ ಎರ್ಡೊಗಾನ್ ವಿರುದ್ಧ ಭಾರತದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, #BoycottTurkey ಎಂಬ ಹ್ಯಾಶ್ಟ್ಯಾಗ್ ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇತ್ತೀಚೆಗೆ ನಡೆದ ‘ಆಪರೇಶನ್ ಸಿಂದೂರ್’ ಸಂದರ್ಭದಲ್ಲಿ ಎರ್ಡೊಗಾನ್ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ನಂತರ ಈ ಟ್ರೆಂಡ್ ರೂಪುಗೊಂಡಿದೆ.


ಇದರಿಂದ ಟರ್ಕಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ರಾಜತಂತ್ರ ಸಂಬಂಧಗಳನ್ನು ಕಡಿತಗೊಳಿಸಲು ಭಾರತೀಯರು ಆಹ್ವಾನಿಸುತ್ತಿದ್ದಾರೆ. ಎರ್ಡೊಗಾನ್ ಅವರು ಬುಧವಾರ ಮತ್ತೊಮ್ಮೆ ಪಾಕಿಸ್ತಾನವನ್ನು “ಸಹೋದರ ದೇಶ” ಎಂದು ಕರೆಯುತ್ತಾ, “ಒಳ್ಳೆಯ ಸಮಯದಲ್ಲೂ, ಕೆಟ್ಟ ಸಮಯದಲ್ಲೂ ಪಾಕಿಸ್ತಾನದ ಜೊತೆಯಲ್ಲಿಯೇ ಇರುತ್ತೇವೆ” ಎಂದು ಹೇಳಿಕೊಟ್ಟರು.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಟ್ವಿಟರ್ (X) ನಲ್ಲಿ ಟರ್ಕಿಯ ಬೆಂಬಲಕ್ಕಾಗಿ ಧನ್ಯವಾದಗಳನ್ನು ವ್ಯಕ್ತಪಡಿಸಿದ ನಂತರ, ಎರ್ಡೊಗಾನ್ ಅವರು ಈ ಹೇಳಿಕೆ ನೀಡಿದರು. ಈ ಬೆಳವಣಿಗೆಯು ಭಾರತದಲ್ಲಿ ಟರ್ಕಿಯ ವಿರುದ್ಧ ತೀವ್ರ ವಿರೋಧವನ್ನು ಉಂಟುಮಾಡಿದ್ದು, ಹಲವು ಭಾರತೀಯರು ಟರ್ಕಿಯ ಉತ್ಪನ್ನಗಳನ್ನು ಬಹಿಷ್ಕರಿಸುವ, ಪ್ರವಾಸ ಕೈ ಬಿಡುವ, ಮತ್ತು ಯಾವುದೇ ರೀತಿಯ ಸಂಬಂಧಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿ ಟರ್ಕಿಯನ್ನು ಬಹಿಷ್ಕರಿಸುವ “#BoycottTurkey” ಎಂಬ ಹ್ಯಾಶ್ಟ್ಯಾಗ್ ವ್ಯಾಪಕವಾಗಿ ಟ್ರೆಂಡಾಗುತ್ತಿದೆ.