ದೆಹಲಿ: ಕಳೆದ ಕೆಲವು ದಿನಗಳಿಂದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಹಾಗೂ ಪಾಕಿಸ್ತಾನ ಇಂದು ತಾತ್ಕಾಲಿಕ ಶಾಂತಿಯ ಹಾದಿಗೆ ಹೆಜ್ಜೆ ಇಟ್ಟಿವೆ. ಇಂದು (ಮೇ 10) ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ ಬಂದಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ
ಇದಕ್ಕೂ ಮುನ್ನ ಉಭಯ ದೇಶಗಳ ನಡುವಿನ ಗಡಿಯಲ್ಲಿ ಭಾರಿ ಗಲಾಟೆ ಮತ್ತು ಉಗ್ರತೆಯ ವಾತಾವರಣ ಇತ್ತು. ಈಗ, ಮೇ 12ರಂದು ಮಾತುಕತೆಗೆ ನಿರ್ಧರಿಸಲಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬೆಳವಣಿಗೆಯನ್ನು ಶ್ಲಾಘಿಸಿ ತಮ್ಮ ಎಕ್ಸ್ ಖಾತೆಯಲ್ಲಿ, “ಭಾರತ ಮತ್ತು ಪಾಕಿಸ್ತಾನ ಬುದ್ಧಿವಂತಿಕೆಯಿಂದ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಶಾಂತಿ ಮತ್ತು ಸಹಜೀವನದತ್ತ ಇವುಗಳ ಹಾದಿ ಶ್ಲಾಘನೀಯ” ಎಂದು ಬರೆದಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೋ ಕೂಡಾ ಈ ಟ್ವೀಟ್ ಅನ್ನು ಹಂಚಿಕೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

