ಧರ್ಮಶಾಲಾ, ಮೇ 08: ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ತಂಡಗಳ ನಡುವಿನ ಐಪಿಎಲ್ ಪಂದ್ಯವನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ. ಭಾರತೀಯ ಸೇನೆಯ ತುರ್ತು ಸೂಚನೆಯಂತೆ ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ಸ್ ಆಫ್ ಮಾಡಲಾಗಿದ್ದು, ಪ್ರೇಕ್ಷಕರನ್ನು ಕೂಡ ತಕ್ಷಣವೇ ಮೈದಾನ ಖಾಲಿ ಮಾಡುವಂತೆ ಸೂಚಿಸಲಾಗಿದೆ.

ಪಂಜಾಬ್ ಕಿಂಗ್ಸ್ 10.1 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿ ಆಡುವಾಗ ಈ ತುರ್ತು ಪರಿಸ್ಥಿತಿ ಉಂಟಾಗಿದೆ. ಆರಂಭದಲ್ಲಿ ತಾಂತ್ರಿಕ ದೋಷ ಎಂದು ಊಹಿಸಲಾಗಿದ್ದರೂ, ಮುಂದಿನ ಕೆಲ ನಿಮಿಷಗಳಲ್ಲಿ ಸೇನೆಯು ಬ್ಲಾಕ್‌ಔಟ್ ಮಾಡಲು ಆದೇಶಿಸಿದ ಬಗ್ಗೆ ಸ್ಪಷ್ಟನೆ ಲಭಿಸಿದೆ.
ಈ ನಡುವೆ, ಜಮ್ಮು-ಕಾಶ್ಮೀರ ಮತ್ತು ಜೈಸಲ್ಮೇರ್ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ಡ್ರೋನ್, ಮಿಸೈಲ್ ಹಾಗೂ ಫೈಟರ್ ಜೆಟ್ ಮೂಲಕ ದಾಳಿ ನಡೆದಿದ್ದು, ಗಡಿಭಾಗದಲ್ಲಿ ಉದ್ವಿಗ್ನತೆ ಮೂಡಿದೆ. ಭಾರತದ ಸೇನೆ ಎರಡು ಪಾಕಿಸ್ತಾನ ಜೆಟ್‌ಗಳನ್ನು ಹೊಡೆದುರುಳಿಸಿದ್ದು, 8 ಮಿಸೈಲ್ ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ.
ಗಡಿಭಾಗಗಳಲ್ಲಿ ಹೈಅಲರ್ಟ್ ಘೋಷಣೆಯಾಗಿದ್ದು, ಧರ್ಮಶಾಲಾದಂತಹ ಕ್ರೀಡಾಂಗಣಗಳಲ್ಲಿ ಜನರ ಭದ್ರತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಪಂದ್ಯವನ್ನು ಅಧಿಕೃತವಾಗಿ ರದ್ದುಪಡಿಸಲಾಗಿದೆ ಎಂದು ಸೂಚಿಸಿದೆ.

