ಆಪರೇಶನ್ ಸಿಂಧೂರ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ತಾಣಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ

ಆಪರೇಶನ್ ಸಿಂಧೂರ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ತಾಣಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ

ಪಹಲ್‌ಗಾಮ್ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಿದ ಭಾರತ, ಬುಧವಾರ ಮುಂಜಾನೆ 1:44ರ ಸುಮಾರಿಗೆ ‘ಆಪರೇಶನ್ ಸಿಂಧೂರ’ ಮೂಲಕ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದನಾ ತಾಣಗಳನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿತು.

ದಾಳಿಗೆ ರಫೆಲ್ ಯುದ್ಧವಿಮಾನಗಳನ್ನು ಬಳಸಲಾಗಿದ್ದು, SCALP ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್ ಬಾಂಬುಗಳು ಉಗ್ರ ತಾಣಗಳನ್ನು ನಿಖರವಾಗಿ ಹೊಡೆದಿವೆ.

ಗುರಿಯಾಗಿದ್ದ ಸ್ಥಳಗಳಲ್ಲಿ ಮುರೀದ್ಕೆ, ಬಹಾವಲ್ಪುರ್, ಮುಝಫ್ಫರಾಬಾದ್, ಚಕ್ ಅಮ್ರು, ಕೋಟ್ಲಿ ಸೇರಿವೆ.ಈ ಹಿನ್ನಲೆಯಲ್ಲಿ ಶ್ರೀನಗರ, ಲೇಹ್, ಅಮೃತ್ಸರ್ ಸೇರಿ ಹಲವಾರು ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಕಾಶ್ಮೀರದ ಕೆಲವು ಭಾಗಗಳಲ್ಲಿ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿವೆ.

ರಾಷ್ಟ್ರೀಯ