ಸುಹಾಸ್ ಶೆಟ್ಟಿ ಹತ್ಯೆ ವಿರೋಧಿಸಿ ಮೇ 2ರಂದು ದಕ್ಷಿಣ ಕನ್ನಡ ಬಂದ್‌ಗೆ ಹಿಂದೂ ಸಂಘಟನೆಗಳ ಕರೆ

ಸುಹಾಸ್ ಶೆಟ್ಟಿ ಹತ್ಯೆ ವಿರೋಧಿಸಿ ಮೇ 2ರಂದು ದಕ್ಷಿಣ ಕನ್ನಡ ಬಂದ್‌ಗೆ ಹಿಂದೂ ಸಂಘಟನೆಗಳ ಕರೆ

ಮಂಗಳೂರು: ಮೇ 1ರಂದು ಮಂಗಳೂರು ಬಜಪೆ ಪ್ರದೇಶದಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಬರ್ಬರ ಹತ್ಯೆಯನ್ನು ಖಂಡಿಸಿ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್‌ಗೆ ಕರೆ ನೀಡಿದೆ ಎಂದು ಹಿಂದೂ ಮುಖಂಡ ಶರಣ್ ಪಂಪ್ವೆಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೇ 2 ರಂದು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಸಹಕರಿಸುವಂತೆ ಅವರು ತಿಳಿಸಿದ್ದಾರೆ. ಇದೊಂದು ಜಿಹಾದಿ ಮನಸ್ಥಿತಿಯ ನಿಷೇಧಿತ ಪಿ ಎಫ್ ಐ ಸಂಘಟನೆಯ ಕೃತ್ಯವಾಗಿದ್ದು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಅಪರಾಧ