ನೀವೂ ಕೂಡಾ ತಡವಾಗಿ ಮಲಗುತ್ತೀರಾ…?

ನೀವೂ ಕೂಡಾ ತಡವಾಗಿ ಮಲಗುತ್ತೀರಾ…?

ಹೊಸದೊಂದು ಅಧ್ಯಯನದ ಪ್ರಕಾರ ತಡರಾತ್ರಿ ಮಲಗುವವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ. ಎಂಟು ವರ್ಷಗಳ ಅಧ್ಯಯನದಲ್ಲಿ, ಮಧ್ಯರಾತ್ರಿ ಒಂದು ಘಂಟೆಯ ನಂತರ ಮಲಗುವವರಲ್ಲಿ ಖಿನ್ನತೆ ಮತ್ತು ಉದ್ವಿಗ್ನತೆ ಹೆಚ್ಚಿರುತ್ತದೆ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ.

ಸ್ಟಾನ್ಫೋರ್ಡ್ ಮೆಡಿಸಿನ್ ನಡೆಸಿದ ಈ ಅಧ್ಯಯನದಲ್ಲಿ ಸುಮಾರು 73,880 ಜನರು ಭಾಗಿಯಾಗಿದ್ದರು. ಅವರ ನಿದ್ರಾ ಶೈಲಿಯನ್ನು ವಿಶ್ಲೇಷಿಸಿ, ಮಲಗುವ ಸಮಯ ಸಮಯ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲಾಯಿತು. ಆಗ ಕೆಲವೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬಂದವು;

  • ತಡರಾತ್ರಿ ಮಲಗುವವರಲ್ಲಿ ಖಿನ್ನತೆ ಮತ್ತು ಉದ್ವಿಗ್ನತೆ ಹೆಚ್ಚಾಗಿತ್ತು.
  • ಬೇಗನೆ ಮಲಗುವವರ ಮಾನಸಿಕ ಆರೋಗ್ಯ ಉತ್ತಮವಾಗಿತ್ತು.
  • ತಡರಾತ್ರಿಯವರೆಗೆ ಎಚ್ಚರವಾಗಿರುವವರು ಅನಾರೋಗ್ಯಕರ ಜೀವನಶೈಲಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿತ್ತು..

ಹಾಗಾದರೆ, ನಿದ್ರೆಯ ಗುಣಮಟ್ಟವನ್ನು ಸುದಾರಿಸುವುದು ಹೇಗೆ?

  • ಯಾವಾಗಲೂ ಎಷ್ಟು ಹೊತ್ತಿಗೆ ಏಳಬೇಕು ಮತ್ತು ಮಲಗಬೇಕು ಎಂಬುದನ್ನು ನಿಗದಿಪಡಿಸಿಕೊಳ್ಳಿ ಮತ್ತು ಪ್ರತೀ ದಿನ ಅದೇ ಸಮಯಕ್ಕೆ ಮಲಗುವುದನ್ನು ಮತ್ತು ಏಳುವುದನ್ನು ರೂಢಿಸಿಕೊಳ್ಳಿ. ಇದರಿಂದ ನೀವು ನಿಮ್ಮ ಆಂತರಿಕ ಘಂಟೆ ಅಂದರೆ ಸರ್ಕಾಡಿಯಂ ರಿದಂ ನ ಲಯದಲ್ಲಿರುತೀರಿ.
  • ಮಲಗುವ ಕನಿಷ್ಟ ಒಂದು ಘಂಟೆ ಮುಂಚಿತವಾಗಿ, ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಪ್ರಕಾಶಮಾನ ಬೆಳಕಿನ ಗ್ಯಾಜೆಟ್‌ಗಳ ಬಳಕೆಯನ್ನು ನಿಲ್ಲಿಸಿ.
  • ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ. ಹಗಲಿನಲ್ಲಿ ವ್ಯಾಯಾಮ ಮಾಡಿ, ಕ್ಯಾಫೈನ್, ಧೂಮಪಾನ ಮತ್ತು ಮದ್ಯಪಾನವನ್ನು ಕಡಿಮೆ ಮಾಡಿ.

ಸರ್ಕಾಡಿಯಂ ರಿದಂ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ತಡ ರಾತ್ರಿ ಮಲಗುವುದು ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಉತ್ತಮ ನಿದ್ರಾ ಅಭ್ಯಾಸಗಳನ್ನು ಅನುಸರಿಸುವ ಮೂಲಕ, ಮಾನಸಿಕ ಆರೋಗ್ಯದ ಅಪಾಯವನ್ನು ಕಡಿಮೆ ಮಾಡಬಹುದು.

ಆಧ್ಯಾತ್ಮ