ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳಿಗೆ ಸಂತಸದ ಸುದ್ದಿ! ಐಪಿಎಲ್ 2025 ಆರಂಭಕ್ಕೂ ಮುನ್ನ, ಆರ್‌ಸಿಬಿ ತನ್ನ ಬಹು ನಿರೀಕ್ಷಿತ “RCB Unbox 2025” ಇವೆಂಟ್ ಅನ್ನು ಮಾರ್ಚ್ 17, 2025 ರಂದು ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಸಜ್ಜಾಗಿದೆ.




ಈ ಬಾರಿ ಅನ್‌ಬಾಕ್ಸ್ ಕಾರ್ಯಕ್ರಮ ಇನ್ನಷ್ಟು ಅದ್ಧೂರಿಯಾಗಿ ನಡೆಯಲಿದ್ದು, ತಂಡದ ಸಂಪೂರ್ಣ ಸ್ಕ್ವಾಡ್ ಪ್ರಾಕ್ಟೀಸ್, ಹೊಸ ಆಟಗಾರರ ಪರಿಚಯ ಹಾಗೂ ವಿಶೇಷ “ಸ್ಕಿಲ್‌ಸ್ ಚಾಲೆಂಜ್” ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲು ಸಿದ್ಧವಾಗಿದೆ.
ಇದರ ಜತೆಗೆ, ಪ್ರಖ್ಯಾತ ಆಸ್ಟ್ರೇಲಿಯನ್ ಡಿಜೆ ಮತ್ತು ಸಂಗೀತಗಾರ ಟಿಮ್ಮಿ ಟ್ರಂಪೆಟ್ ಅವರ ಅದ್ಬುತ ಲೈವ್ ಪರ್ಫಾರ್ಮೆನ್ಸ್ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ.
ಟಿಕೆಟ್‌ಗಳ ಮಾರಾಟ ಇಂದು ಆರ್‌ಸಿಬಿ ಅಧಿಕೃತ ಜಾಲತಾಣದಲ್ಲಿ ಪ್ರಾರಂಭವಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಿಳಿಸಿದೆ.