ವರುಣ್ ಚಕ್ರವರ್ತಿಯ ಮಾರಕ ದಾಳಿಗೆ ನ್ಯೂಜಿಲೆಂಡ್ ತತ್ತರ

ವರುಣ್ ಚಕ್ರವರ್ತಿಯ ಮಾರಕ ದಾಳಿಗೆ ನ್ಯೂಜಿಲೆಂಡ್ ತತ್ತರ

ದುಬೈ (ಮಾ.02): ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಮತ್ತೊಂದು ಭರ್ಜರಿ ಪ್ರದರ್ಶನ ನೀಡಿದ್ದು, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 44 ರನ್ ಜಯ ಸಾಧಿಸಿದೆ. 249 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ವರುಣ್ ಚಕ್ರವರ್ತಿಯ ಮಾರಕ ಬೌಲಿಂಗ್ ದಾಳಿಗೆ 205 ರನ್‌ಗಳಿಗೆ ಆಲೌಟ್ ಆಯಿತು.

ಭಾರತ ಅಜೇಯವಾಗಿ ಸೆಮಿಫೈನಲ್‌ಗೆ: ಈ ಟೂರ್ನಿಯಲ್ಲಿ ಭಾರತ ಆಡಿದ ಮೂರು ಪಂದ್ಯಗಳನ್ನೂ ಗೆದ್ದು ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಈಗ ನ್ಯೂಜಿಲೆಂಡ್ ವಿರುದ್ಧ ಜಯ ಗಳಿಸಿರುವ ಭಾರತ 6 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಬಿ ಗುಂಪಿನಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ.

ಭಾರತದ ಸೆಮಿಫೈನಲ್ ಮುಖಾಮುಖಿ – ಆಸ್ಟ್ರೇಲಿಯಾ!
ಭಾರತದ ಅಭಿಮಾನಿಗಳು ಈಗ ಭರ್ಜರಿ ಸೆಮಿಫೈನಲ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟೀಂ ಇಂಡಿಯಾ ಇದೂ ಕೂಡ ಗೆದ್ದು ಫೈನಲ್ ಪ್ರವೇಶಿಸುವುದಾ? ಕಾದು ನೋಡೋಣ!

ಕ್ರೀಡೆ