ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ 2022 ಮತ್ತು 2023 ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭವು ತಾ. 28.02.2025 ರಂದು ಕೊಡಗು ಗೌಡ ಸಮಾಜ ಮಡಿಕೇರಿಯಲ್ಲಿ ನಡೆಯಲಿದೆ.



ಈ ಸಮಾರಂಭದಲ್ಲಿ ಸುಳ್ಯದ ಶ್ರೀಮತಿ ವಿಮಲಾರುಣ ಪಡ್ಡoಬೈಲು ಇವರ *ಸೂoತ್ರಿ* ಅರೆಭಾಷೆ ಕವನ ಸಂಕಲನ ಬಿಡುಗಡೆಯಾಗಲಿದೆ.
ಈಗಾಗಲೇ ಇವರ ಇಬ್ಬನಿಯ ಹನಿ ಮತ್ತು ಮಿಂಚುಹುಳು ಕನ್ನಡ ಕವನ ಸಂಕಲನ ಬಿಡುಗಡೆಯಾಗಿದ್ದು, ಕಥೆ ಕವನ ಲೆಖನ ಲಲಿತಪ್ರಬಂಧ ಹಾಗು ಅವಲೋಕನ ಪತ್ರಿಕೆ ಮತ್ತು ವಿಶೇಷಾಂಕಗಳಲ್ಲಿ ಪ್ರಕಟಗೊಂಡಿವೆ, ಮಡಿಕೇರಿ ಆಕಾಶವಾಣಿಯಲ್ಲಿ ಅರೆಭಾಷೆ ಕವನ ಮತ್ತು ಲಲಿತ ಪ್ರಬಂಧ ಪ್ರಸಾರವಾಗಿಗೊಂಡಿವೆ.