ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಧಗಧಗಿಸಿದ ಬೆಂಕಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಧಗಧಗಿಸಿದ ಬೆಂಕಿ

ಮೈಸೂರು: ನಿನ್ನೆ ರಾತ್ರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಹತ್ತಿಕೊಂಡಿದ್ದು, ರಾತ್ರಿಯಿಡೀ ಬೆಂಕಿ ಉರಿಯುತ್ತಲೇ ಇತ್ತು. ಜೋರಾಗಿ ಗಾಳಿ ಬೀಸುತ್ತಿದ್ದರಿಂದ, ಬೆಂಕಿಯು ಹಬ್ಬುತ್ತಾ ಮುಂದೆ ಸಾಗಿತ್ತು. ನಿನ್ನೆ ಬೆಂಕಿ ಹಿನ್ನೆಲೆ, ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ದರ್ಶನವನ್ನು ನಿಷೇಧಿಸಲಾಗಿತ್ತು. ಚಾಮುಂಡಿ ಬೆಟ್ಟದಿಂದ ಉತ್ತನಹಳ್ಳಿಗೆ ಹೋಗುವ ದಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಅಲ್ಲಿಗೆ ಹೋಗುವುದಕ್ಕೆ ರಸ್ತೆ ಸಂಪರ್ಕವಿಲ್ಲದ ಕಾರಣ, ಅಗ್ನಿಶಾಮಕ ದಳಕ್ಕೆ ಬೆಂಕಿ ನಂದಿಸಲು ತೊಂದರೆಯಾಗಿತ್ತು.

ಹರಸಾಹಸ ಮಾಡಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ನಿಷೇದವನ್ನು ಹಿಂಪಡೆದಿರುವುದರಿಂದ, ಈಗ ಭಕ್ತಾದಿಗಳು ದೇವಾಲಯಕ್ಕೆ ಹೋಗಬಹುದಾಗಿದೆ.

ರಾಜ್ಯ