ನ್ಯೂಸ್ ರೂಮ್ ಫಸ್ಟ್ ವೆಬ್ ನ್ಯೂಸ್ ಚಾನೆಲ್‌ನ ವಾಟ್ಸಾಪ್ ಗ್ರೂಪ್ ಗಳ 5 ಅಡ್ಮಿನ್‌ಗಳ ವಾಟ್ಸಪ್ ಸಂಖ್ಯೆಗಳು ಏಕಕಾಲದಲ್ಲಿ ಬ್ಲಾಕ್ ಆಗಿರುವುದು ಗಂಭೀರ ವಿಷಯವಾಗಿದೆ.


ಈ ಘಟನೆಯ ಹಿಂದೆ ವೆಬ್ ನ್ಯೂಸ್ ವಲಯದ ಮನಸ್ಸಿನಲ್ಲಿ ಮಾಲಿನ್ಯ ತುಂಬಿರುವ ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸುವ ವಿಕೃತ ಮನಸ್ಸಿನ ಅತೃಪ್ತ ಆತ್ಮಗಳ ಕೈವಾಡ ಇರುವುದು ಸ್ಪಷ್ಟವಾಗಿದೆ.
ಏನಿದು ಘಟನೆ?
ನಮ್ಮ ನ್ಯೂಸ್ ಚಾನೆಲ್ ಜನಪ್ರಿಯತೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ನಮ್ಮ 5 ಅಡ್ಮಿನ್‌ಗಳ ವಾಟ್ಸಾಪ್ ಸಂಖ್ಯೆಗಳು ‘Reports’ ಮೂಲಕ ಬ್ಲಾಕ್ ಮಾಡಲಾಗಿದೆ.
ಆದರೆ ರಿಪೋರ್ಟ್ ಮಾಡಿದವರ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ ನಾವು ಮತ್ತೆ ಮರಳಿ ಬಂದಿದ್ದೇವೆ.
ಇದಕ್ಕೆ ಕಾರಣವೇನು?
ನಮ್ಮ ಬೆಳವಣಿಗೆ ಸಹಿಸದ ಅತೃಪ್ತ ಆತ್ಮಗಳು ಮತ್ತು ನಮ್ಮ ಅನ್ನ ತಿಂದು ನಮಗೆ ತಿರುಗಿ ನಿಂತ ಕೆಲವು ಹೀನ ಮನಸ್ಥಿತಿಯ ಅಧಮರು ಒಟ್ಟಾಗಿ ಸೇರಿ ನಮ್ಮ ಅಡ್ಮಿನ್ ಗಳ ನಂಬರ್ ಅನ್ನು ರಿಪೋರ್ಟ್ ಮಾಡಿರುವುದು.
ನಾವು ಏನು ಮಾಡುತ್ತಿದ್ದೇವೆ?
✔️ ವಾಟ್ಸಾಪ್ ತಾಂತ್ರಿಕ ತಂಡಕ್ಕೆ ಈ ಕುರಿತು ವಿಸ್ತೃತ ಇಮೇಲ್ ಕಳುಹಿಸಲಾಗಿದೆ.
✔️ ಎಲ್ಲಾ ಸದಸ್ಯರಿಗೆ ನಮ್ಮ ಅಧಿಕೃತ ವೆಬ್‌ಸೈಟ್ ಹಾಗೂ ಇತರ ಪ್ಲಾಟ್‌ಫಾರ್ಮ್‌ಗಳ ಮಾಹಿತಿ ಹಂಚಲಾಗಿದೆ.
✔️ ಕೊನೆಯದಾಗಿ ನಮ್ಮ ಅಡ್ಮಿನ್ ಗಳ ನಂಬರ್ ರಿಪೋರ್ಟ್ ಮಾಡಿ ಬ್ಲಾಕ್ ಮಾಡಿಸಿದ ವಿಕೃತ ಮನಸ್ಸಿನ ಶ್ವಾನಗಳಿಗೆ ಚುಚ್ಚು ಮದ್ದು ನೀಡಲು ಎಲ್ಲಾ ತಯಾರಿ ನಡೆಸಿದ್ದೇವೆ, ಸಮಯ ಸಂದರ್ಭ ನೋಡಿ ಚುಚ್ಚು ಮದ್ದು ನೀಡಲಿದ್ದೇವೆ.
ನಾವು ಇಂತಹ ಘಟನೆಗಳಿಗೆ ಬೆದರಿ ಹಿಂದೆ ಸರಿಯುವವರಲ್ಲ. ಈ ಹಿಂದಿನಂತೆ ನಿಖರ ಸುದ್ದಿ ನೀಡುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರೆಯುತ್ತದೆ.ನಿಮ್ಮೆಲ್ಲರ ಪ್ರೀತಿ ಸಹಕಾರ ಮುಂದೆಯೂ ನಮ್ಮ ಜೊತೆ ಇರಲೆಂದು ಆಶಿಸುತ್ತೇವೆ.