ದಿಲ್ಲಿ ವಿಧಾನಸಭೆ 2025 – ಜಯಭೇರಿ ಬಾರಿಸಿದ ಬಿಜೆಪಿ; ಮೋದಿ ಗೆಲುವಿನ ಭಾಷಣದಲ್ಲೇನಿದೆ?

ದಿಲ್ಲಿ ವಿಧಾನಸಭೆ 2025 – ಜಯಭೇರಿ ಬಾರಿಸಿದ ಬಿಜೆಪಿ; ಮೋದಿ ಗೆಲುವಿನ ಭಾಷಣದಲ್ಲೇನಿದೆ?

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದರು. ಈ ಗೆಲುವಿನೊಂದಿಗೆ ಬಿಜೆಪಿ 27 ವರ್ಷಗಳ ನಂತರ ದಿಲ್ಲಿಯ ಗದ್ದುಗೆ ಏರಿದೆ.

ಪ್ರಧಾನ ಮಂತ್ರಿಗಳ ಭಾಷಣದಲ್ಲಿ ಏನಿತ್ತು?

ದಿಲ್ಲಿ ಜನತೆಗೆ ಕೃತಜ್ಞತೆ:

ಪ್ರಧಾನಿ ಮೋದಿ ದಿಲ್ಲಿಯ ಜನತೆಯ ಪರಿಪೂರ್ಣ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. “ನಾನು ನನ್ನ ತಲೆ ಬಾಗಿಸಿ ದಿಲ್ಲಿಯ ಪ್ರತಿಯೊಬ್ಬ ಕುಟುಂಬಕ್ಕೂ ಧನ್ಯವಾದ ತಿಳಿಸುತ್ತೇನೆ. ನೀವು ನಮ್ಮ ಮೇಲೇ ಹೃದಯಪೂರ್ವಕವಾಗಿ ವಿಶ್ವಾಸವಿಟ್ಟಿದ್ದೀರಿ. ಅದನ್ನು ನಾವು ವಿಕಾಸದ ಮೂಲಕ, ನಮ್ಮ ಸೇವೆಯ ಮೂಲಕ ನಿಮಗೆ ಹಿಂತಿರುಗಿಸುತ್ತೇವೆ” ಎಂದರು.

ಆಪ್ ಆಡಳಿತಕ್ಕೆ ಟೀಕೆ

ಅವರು ದಶಕದಿಂದಲೂ ದಿಲ್ಲಿಯಲ್ಲಿ ಆಡಳಿತ ನಡೆಸಿದ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಗಂಭೀರವಾಗಿ ಟೀಕಿಸಿದರು. “ಈ ಚುನಾವಣೆ ಫಲಿತಾಂಶವು ಅವ್ಯವಸ್ಥೆ, ಅಹಂಕಾರ, ಮೋಸವನ್ನು ತಿರಸ್ಕರಿಸಿದೆ. ಜನತೆ ಅಭಿವೃದ್ಧಿ ಮತ್ತು ಪಾರದರ್ಶಕತೆಯನ್ನು ಆರಿಸಿಕೊಂಡಿದ್ದಾರೆ.” ಎಂದರು.

ನೂತನ ಅಭಿವೃದ್ಧಿಯ ಭರವಸೆ:

ಮೋದಿ ದಿಲ್ಲಿಯ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂಬುದನ್ನು ಪದೇ ಪದೇ ಹೇಳುತ್ತಿದ್ದರು.  ನೀವು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಯಾಗಿಸುವುದಿಲ್ಲ. ದಿಲ್ಲಿಯನ್ನು ಸ್ವಚ್ಛತೆ ಮತ್ತು ಪ್ರಗತಿಯ ಮಾದರಿಯಾಗಿ ಪರಿವರ್ತಿಸಲು ಶ್ರಮಿಸುತ್ತೇವೆ. ಜನಪರ ಆಡಳಿತವನ್ನು ನಾವು ನೀಡುತ್ತೇವೆ.” ಎಂಬ ಭರವಸೆಯನ್ನು ದಿಲ್ಲಿಯ ಜನತೆಗೆ ನೀಡಿದ್ದಾರೆ.

ಜವಾಬ್ದಾರಿ ಮತ್ತು ಪಾರದರ್ಶಕತೆ:

ಪ್ರಧಾನಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. “ಆಪ್ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ದಿಲ್ಲಿಯ ಜನರ ಹಣವನ್ನು ಕೊಳ್ಳೆ ಹೊಡೆದವರಿಗೆ ತಕ್ಕ ಶಾಸ್ತಿ ಮಾಡುವುದು ಖಚಿತ” ಎಂದರು.

ಏಕತೆಯ ಸಂದೇಶ:

ದೆಹಲಿ ಒಂದು ‘ಮಿನಿ ಹಿಂದುಸ್ತಾನ’. ಇಲ್ಲಿಯ ಜನಾಂಗೀಯ ವೈವಿಧ್ಯತೆ ಭಾರತದ ಆಸ್ತಿ. ನಮ್ಮ ಸರಕಾರ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಸಮಾನ ಅವಕಾಶ ನೀಡಲಾಗುತ್ತದೆ.” ಎಂದಿದ್ದಾರೆ.

ರಾಷ್ಟ್ರೀಯ