76ನೇ ಗಣರಾಜ್ಯೋತ್ಸವದ ಸಂಭ್ರಮ: ದೇಶಭಕ್ತಿಯ ಮಹಾಸಂಭ್ರಮ

76ನೇ ಗಣರಾಜ್ಯೋತ್ಸವದ ಸಂಭ್ರಮ: ದೇಶಭಕ್ತಿಯ ಮಹಾಸಂಭ್ರಮ

ಭಾರತವು ತನ್ನ 76ನೇ ಗಣರಾಜ್ಯೋತ್ಸವವನ್ನು ಇಂದು ಅದ್ದೂರಿಯಾಗಿ ಆಚರಿಸಿತು. “ಸುವರ್ಣ ಭಾರತ ಪರಂಪರೆ ಮತ್ತು ಪ್ರಗತಿ” ಎಂಬ ಥೀಮ್ ವೊಂದಿಗೆ ನವ ದೆಹಲಿಯ ರಾಜಪಥದಲ್ಲಿ ನಡೆದ ಪರೇಡ್ ರಾಷ್ಟ್ರದ ಸೈನಿಕ ಶಕ್ತಿಯನ್ನೂ, ಸಾಂಸ್ಕೃತಿಕ ವೈವಿಧ್ಯತೆಯನ್ನೂ ಪ್ರದರ್ಶಿಸಲಾಯಿತು. ಈ ಬಾರಿಯ ಮುಖ್ಯ ಅತಿಥಿಗಳಾದ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೋ ಸೇರಿದಂತೆ ಗಣ್ಯರು ಗಣರಾಜ್ಯೋತ್ಸವದ ಪರೇಡ್ ಅನ್ನು ಕಣ್ತುಂಬಿಸಿಕೊಂಡರು. ಸುಂದರ ಟ್ಯಾಬ್ಲೊಗಳು ಮತ್ತು ವೀರ ಸೈನಿಕರ ಪಥಸಂಚಲನ ಜನರ ಮೆಚ್ಚುಗೆ ಗಳಿಸಿತು. ಕೊನೆಯದಾಗಿ, ವಾಯುಪಡೆ ಹಾರಾಟದ ಕೌಶಲ್ಯ ಅಂಬರದಲ್ಲಿ ಎಲ್ಲರನ್ನೂ ಆಕರ್ಷಿಸಿತು.

ರಾಷ್ಟ್ರೀಯ