ಉಪ್ಪಿನಂಗಡಿ : ಚಿನ್ನ, ನಗದು ಕಳ್ಳತನ; ದೂರು ದಾಖಲು

ಉಪ್ಪಿನಂಗಡಿ : ಚಿನ್ನ, ನಗದು ಕಳ್ಳತನ; ದೂರು ದಾಖಲು

ಉಪ್ಪಿನಂಗಡಿ: ಇಲ್ಲಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ತಂಗಚ್ಚನ್‌ ಎಂಬವರ ಮನೆಗೆ ನುಗ್ಗಿ 2.46 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ನಗದನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಮನೆ ಮಂದಿ ಸಮೀಪದ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್‌ ಪೂಜೆಗೆ ಹೋಗಿದ್ದ ವೇಳೆ ಮುಂಭಾಗದ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ 78 ಸಾವಿರ ರೂ. ನಗದು ಸಹಿತ 42 ಗ್ರಾಮ್‌ ತೂಕದ ವಿವಿಧ ಚಿನ್ನದ ಆಭರಣಗಳನ್ನು ಕದ್ದಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ.

ರಾಜ್ಯ