
ಮೈಸೂರು: 16/12/2024 ರಂದು ಮೈಸೂರಿನ ವಿಜಯನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಯೋಗಗುರು ಬಿ.ಕೆ.ಎಸ್ ಅಯ್ಯಂಗಾರ್ ರವರ ಜಯಂತಿ ಮತ್ತು ವಿಜಯ್ ದಿವಸ್ ಅನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಬಿ.ಕೆ.ಎಸ್ ಅಯ್ಯಂಗಾರರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಲಾಯಿತು. ಕಾರ್ಯಕ್ರಮದ ಭಾಗವಾಗಿ, ಮಕ್ಕಳಿಗೆ ಈ ದಿನದ ಮಹತ್ವವನ್ನು ತಿಳಿಸಲಾಯಿತು. ತದನಂತರ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗ ಪ್ರದರ್ಶನವನ್ನು ಒಳಗೊಂಡ ಕಿರುನಾಟಕವೊಂದು ವಿದ್ಯಾರ್ಥಿಗಳ ಪ್ರತಿಭೆಗೆ ನೀಡಿದ ಕೈಗನ್ನಡಿಯಂತಿತ್ತು.

ಯೋಗಗುರು ಬಿ.ಕೆ.ಎಸ್ ಅಯ್ಯಂಗಾರ್ ರವರ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಅಮರ್ ಜವಾನ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಶಾಲಾ ನೌಕರ ಬೊಮ್ಮರವರು ಶೌರ್ಯ ಪ್ರಶಸ್ತಿ ಪಡೆದ ಹೆಚ್. ಎನ್. ಮಹೇಶ್, ಹಾಗೂ ವೀರ ಸೈನಿಕ ಹನುಮಂತಪ್ಪ ಕೊಪ್ಪರವರ ರೋಚಕವಾದ ಸಾಹಸ ಗಾಥೆಯನ್ನು ಮೈನವಿರೇಳುವಂತೆ ವಿವರಿಸಿದರು.

ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಕೆ. ಎಲ್. ಚಂದ್ರಶೇಖರ್ ರವರು 16/12/1971ರಂದು ಭಾರತೀಯ ಸೈನಿಕರು ಪಾಕಿಸ್ತಾನದ ಸೇನೆಯನ್ನು ಸೋಲಿಸಿದ ಹಿನ್ನೆಲೆಯನ್ನು ವಿವರಿಸಿದರು. ಕಛೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಂದ ಹಾಡಲ್ಪಟ್ಟ ದೇಶಭಕ್ತಿ ಗೀತೆಗಳು ಕಾರ್ಯಕ್ರಮಕ್ಕೆ ಮತ್ತಷ್ಟ ಮೆರುಗು ತಂದಿತ್ತು. ಕೊನೆಯದಾಗಿ ಶಾಲೆಯ ಘೋಷ್ ತಂಡದಿಂದ ಸೇನಾ ಗೌರವವನ್ನು ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ನೌಕರರು, ವಿದ್ಯಾರ್ಥಿಗಳು ಹಾಗೂ ಕೆಲವು ಪೋಷಕರು ಉಪಸ್ಥಿತರಿದ್ದರು.
